Bengaluru, ಮಾರ್ಚ್ 3 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಮಾರ್ಚ್ 2ರ ಸಂಚಿಕೆಯಲ್ಲಿ ತಾಂಡವ್ ಮತ್ತು ಶ್ರೇಷ್ಠಾ, ಮನೆಯಲ್ಲಿ ಕುಳಿತುಕೊಂಡು ಸಂಚು ರೂಪಿಸುತ್ತಿದ್ದಾರೆ. ಭಾಗ್ಯ ಮನೆಯನ್ನು ಉಳಿಸಿಕೊಳ್ಳಲು ಏನಾದರೂ ಪ್ಲ್ಯಾನ್ ಮಾಡುತ್ತಾಳೆ, ಆದರೆ ಅದಕ್ಕೆ ನಾವು ಅಡ್ಡಿಪಡಿಸಬೇಕು ಮತ್ತು ಅವಳನ್ನು ಹಾಗೆಯೇ ಇರಲು ಬಿಡಬಾರದು ಎಂದು ಯೋಚಿಸುತ್ತಿರುತ್ತಾರೆ. ಏನು ಮಾಡಬೇಕೆಂದು ತಾಂಡವ್‌ಗೆ ತಿಳಿಯುವುದಿಲ್ಲ. ಭಾಗ್ಯ ಬಳಿ ಕೆಲಸವಿಲ್ಲ, ಬೇರೆ ದುಡ್ಡು ಕೂಡ ಮನೆಯಲ್ಲಿಲ್ಲ, ಹೀಗಾಗಿ ಅವಳೇನು ಮಾಡಬಹುದು ಎಂದು ಯೋಚಿಸುತ್ತಿರುತ್ತಾನೆ. ಆಗ ಅವನಿಗೆ ಏನೋ ನೆನಪಾಗುತ್ತದೆ. ಕೂಡಲೇ ಫೋನ್ ಕೈಗೆತ್ತಿಕೊಳ್ಳುತ್ತಾನೆ.

ಮನೆ ಉಳಿಸಿಕೊಳ್ಳುವ ಭಾಗ್ಯಳ ಪ್ಲ್ಯಾನ್ ತಿಳಿಯಲು ತಾಂಡವ್‌ಗೆ ತಕ್ಷಣಕ್ಕೆ ಒಂದು ಐಡಿಯಾ ಹೊಳೆದಿದೆ. ಕೂಡಲೇ ಅವನು ಮಗಳು ತನ್ವಿಗೆ ಫೋನ್ ಮಾಡುತ್ತಾನೆ. ಅವಳಿಗೆ ಮೊದಲು ಸಂಶಯವಾದರೂ, ಅಪ್ಪ ಯಾಕೆ ಫೋನ್ ಮಾಡಿರಬಹುದು ಎಂದು ಫೋನ್ ರಿಸೀವ್ ಮಾಡುತ್ತಾಳೆ. ಆಗ ತಾಂಡವ್, ಮಗಳು ತನ್ವಿ ಜೊತೆ ಅತ್ಯಂತ ...