Bengaluru, ಏಪ್ರಿಲ್ 18 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 17ರ ಸಂಚಿಕೆಯಲ್ಲಿ ಭಾಗ್ಯ ಲೈಸನ್ಸ್ ಪಡೆಯುವ ಸಲುವಾಗಿ ಆಹಾರ ಇಲಾಖೆಯ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದ್ದಾಳೆ. ಅವರು ಭಾಗ್ಯಳ ಕರೆ ಸ್ವೀಕರಿಸಿಲ್ಲ, ನಂತರ ಆಫೀಸ್‌ ನಂಬರ್‌ಗೆ ಕರೆ ಮಾಡಿದ್ದಾಳೆ. ಅಲ್ಲಿಗೆ ಬಂದ ಅಧಿಕಾರಿ, ಭಾಗ್ಯಗೆ ಲೈಸನ್ಸ್ ಕೊಡಲು ಇನ್ನೂ ತಡವಾಗುತ್ತದೆ ಎಂದು ತಿಳಿಸಿ ಎಂದು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಭಾಗ್ಯಗೆ ಅವರು ಲೈಸನ್ಸ್ ಸಿಕ್ಕಾಗ ಹೇಳುತ್ತೇವೆ, ಪದೇ ಪದೇ ಫೋನ್ ಮಾಡಬೇಡಿ ಎಂದು ಕರೆ ಕಟ್ ಮಾಡಿದ್ದಾರೆ. ಅವರ ಉತ್ತರದಿಂದ ಭಾಗ್ಯಗೆ ಸಮಾಧಾನವಾಗಿಲ್ಲ, ಅಲ್ಲದೆ, ಅವಳಿಗೆ ನನ್ನ ವಿರುದ್ಧ ಯಾರೋ ಸಂಚು ರೂಪಿಸಿದ್ದಾರೆ ಎನ್ನುವ ಸಂಶಯ ಶುರುವಾಗಿದೆ.

ಅಷ್ಟರಲ್ಲಿ ಕನ್ನಿಕಾ ಕಾಮತ್ ಭಾಗ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಭಾಗ್ಯಳನ್ನು ಕಂಡು, ಹೇಗಿದ್ದೀಯಾ ಭಾಗ್ಯ, ತುಂಬಾ ಸಮಯವಾಯಿತು, ನಿನ್ನನ್ನು ನೋಡಿಕೊಂಡು ಹೋಗೋಣ ಎಂದು ಬಂದೆ ಎಂದು ಹೇಳಿದ್ದಾಳೆ. ಅವಳ ಗತ್ತು ಮತ್ತು ಬಿನ್ನಾಣ ನೋಡಿ ಮನೆಯವರಿಗ...