ಭಾರತ, ಫೆಬ್ರವರಿ 5 -- ಧಾರವಾಡ :‌ ಕರ್ನಾಟಕದಲ್ಲಿ ಮೈಕ್ರೊ ಪೈನಾನ್ಸ್‌ನಿಂದ ಸಾಲ ಪಡೆದು ಹಲವಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಈ ಸಂಬಂಧ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಆ ಮೂಲಕ ಮೈಕ್ರೊ ಫೈನಾನ್ಸ್‌ ಅಬ್ಬರಕ್ಕೆ ಮೂಗುದಾರ ಹಿಡಿಯಲು ಮುಂದಾಗಿದೆ. ಈ ನಡುವೆಯೂ, ಸಾಲ ಪಡೆದವರ ಮೇಲೆ ಶೋಷಣೆ ಮುಂದುವರೆದಿದೆ. ರಾಜ್ಯದ ಹಲವು ಭಾಗಗಳಲ್ಲಿ ಸಾವು-ನೋವಿನ ಘಟನೆ ವರದಿಯಾಗುತ್ತಿದೆ. ಜತೆಗೆ ಕೆಲವೆಡೆ ಮನೆಯವರನ್ನೇ ಹೊರಗೆ ಹಾಕಿರುವ ಘಟನೆ ಬೆಳಕಿಗೆ ಬರುತ್ತಿದೆ. ಮನೆಯ ಬಾಗಿಲು ಹಾಕಿ ಬೀಗ ಜಡಿದು ಮನೆ ಸದಸ್ಯರನ್ನು ಹೊರ ಹಾಕಿರುವ ಘಟನೆ ಕುಂದಗೋಳ ತಾಲ್ಲೂಕಿನ ಹಿರೇನೇರ್ತಿ ಹಾಗೂ ಕುಂದಗೋಳ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಹಿರೇನೇರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಹಾಗೂ ಕುಂದಗೋಳ ಪಟ್ಟಣದ ದಾಸಪ್ಪ ನಾಗಣ್ಣವರ ಅವರ ಮನೆಯಲ್ಲಿ ಈ ಘಟನೆ ಜರುಗಿವೆ. ಮೈಕ್ರೊ ಪೈನಾನ್ಸ್ ಹಾವಳಿಯಿಂದ ಕಾಟ ತಾಳಲಾರದೆ ಕುಟುಂಬ ಹೈರಾಣಾಗಿದೆ. ನಮ್ಮ ಮನೆಗೆ 4 ಜನ ಬಂದು ಮನೆಯಲ್ಲಿರುವ ಎಲ್ಲಾ ಸಾಮ...