Bengaluru, ಜನವರಿ 25 -- Lakshmi Nivasa Serial: ಅಜ್ಜಿ ಕೋಮಾದಲ್ಲಿದ್ದಾರೆ ಎಂದು ತಿಳಿದಾಗಿನಿಂದ ವೆಂಕಿ ಬೇಸರಗೊಳ್ಳುತ್ತಾನೆ. ಅಜ್ಜಿಯನ್ನು ನೋಡಲು ಕಾತರದಲ್ಲಿರುತ್ತಾನೆ, ಕೆಲಸದಿಂದ ಬಿಡುವು ಪಡೆದು ಚೆಲ್ವಿ ಜೊತೆ ಅಜ್ಜಿಯನ್ನು ನೋಡಲು ಹೋಗುತ್ತಾನೆ. ಏನೂ ಮಾಹಿತಿ ನೀಡದೆ ಇದ್ದಕ್ಕಿದ್ದಂತೆ ಮನೆಗೆ ಬಂದ ವೆಂಕಿ ಹಾಗೂ ಚೆಲ್ವಿಯನ್ನು ಕಂಡು ಜಯಂತ್‌ ಗಾಬರಿಯಾಗುತ್ತಾನೆ. ಏನು ಇದ್ದಕ್ಕಿದ್ದಂತೆ ಬಂದಿದ್ದೀರಿ ಎನ್ನುತ್ತಾನೆ. ಅಜ್ಜಿ ನೋಡಲು ಬಂದಿದ್ದು ಎಂದು ಚೆಲ್ವಿ ಹೇಳುತ್ತಾಳೆ. ಒಲ್ಲದ ಮನಸ್ಸಿನಂದಲೇ ನಗುತ್ತಾ ಒಳಗೆ ಬನ್ನಿ ಎಂದು ಜಯಂತ್‌ , ಅವರಿಬ್ಬರನ್ನೂ ಬರಮಾಡಿಕೊಳ್ಳುತ್ತಾನೆ.

ಅಣ್ಣ ಅತ್ತಿಗೆಯನ್ನು ಕಂಡು ಜಾನು ಖುಷಿಯಾಗುತ್ತಾಳೆ. ಮನೆಯಿಂದ ತಂಗಿಗಾಗಿ ತಂದಿದ್ದ ಎಲ್ಲವನ್ನೂ ವೆಂಕಿ ಹಾಗೂ ಚೆಲ್ವಿ, ಜಾನುಗೆ ಕೊಡುತ್ತಾರೆ. ನಂತರ ಅಜ್ಜಿ ನೋಡಲು ರೂಮ್‌ಗೆ ಹೋಗುತ್ತಾರೆ. ಅಜ್ಜಿಯನ್ನು ನೋಡುತ್ತಿದ್ದಂತೆ ವೆಂಕಿ ಅಳಲು ಶುರು ಮಾಡುತ್ತಾನೆ. ಜಾನು ಕೂಡಾ ಅಳುತ್ತಾಳೆ. ಪ್ರೀತಿಯ ಹೆಂಡತಿ ಅಳುವುದನ್ನು ನೋಡಿ ಜಯಂತ್‌ ಸಿಟ್ಟ...