ಭಾರತ, ಫೆಬ್ರವರಿ 5 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಹೋಟೆಲ್‌ನ ಶೆಫ್ ಕೆಲಸಕ್ಕೆ ಭಾಗ್ಯ ರಾಜೀನಾಮೆ ಕೊಟ್ಟು ಮನೆಗೆ ಮರಳಿ ಬಂದಿದ್ದಾಳೆ. ಮನೆಗೆ ಮರಳುವಾಗ ದಾರಿಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಳೆ. ದೇವರಲ್ಲಿ ತನ್ನ ಕಷ್ಟವನ್ನು ಭಾಗ್ಯ ಹೇಳಿಕೊಂಡಿದ್ದಾಳೆ. ದೇವಸ್ಥಾನದಲ್ಲಿ ಅರ್ಚಕರು, ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ ಎಂದು ಹರಸಿದ್ದಾರೆ. ನಂತರ ಭಾಗ್ಯ ಮನೆಗೆ ಮರಳಿದ್ದಾಳೆ. ಮನೆಯಲ್ಲಿ ಎಲ್ಲರೂ ಭಾಗ್ಯಾ ಬರುವುದನ್ನೇ ಎದುರು ನೋಡುತ್ತಿದ್ದಾರೆ. ಅಲ್ಲದೆ, ಪೂಜಾ ಹೋಟೆಲ್‌ಗೆ ಫೋನ್ ಮಾಡಿ, ಹಿತ ಜೊತೆ ಮಾತನಾಡುತ್ತಾಳೆ. ಹಿತ ಅವಳಿಗೆ ಎಲ್ಲವನ್ನೂ ವಿವರಿಸುತ್ತಾಳೆ. ಸಹೋದ್ಯೋಗಿಗಳ ಕೆಲಸ ಉಳಿಸಲು, ತಾನು ರಾಜೀನಾಮೆ ಕೊಟ್ಟು ಬಂದಿರುವುದು ಮನೆಯವರಿಗೆ ತಿಳಿಯುತ್ತದೆ. ಅದೇ ಹೊತ್ತಿಗೆ ಭಾಗ್ಯ, ಮನೆಗೆ ಬರುತ್ತಾಳೆ.

ಇದನ್ನೂ ಓದಿ: ನಕಲಿ ಒಡವೆ ಕಂಡು ಕೂಗಾಡಿದ ಸಿಂಚನ; ಮತ್ತೊಂದು ಕ್ಯಾಮೆರಾ ಹುಡುಕಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

ಭಾಗ್ಯ ಮನೆಗೆ ಬಂದ ಕೂಡಲ...