ಭಾರತ, ಫೆಬ್ರವರಿ 3 -- ತರಹೇವಾರಿ ಬಿರಿಯಾನಿ ಖಾದ್ಯಗಳನ್ನು ನೀವು ತಿಂದಿರಬಹುದು. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಸೀಗಡಿ ಬಿರಿಯಾನಿ ತಿಂದಿರಬಹುದು. ಅದೇ ರೀತಿ ಕೆಲವರಿಗೆ ಮೊಟ್ಟೆ ಬಿರಿಯಾನಿ ಬಹಳ ಅಚ್ಚುಮೆಚ್ಚು. ಇದು ಬಹಳ ಸರಳ ಹಾಗೂ ಬೇಗನೇ ಸಿದ್ಧವಾಗುವ ಖಾದ್ಯ. ಮನೆಗೆ ಯಾರಾದರೂ ದಿಢೀರನೇ ಅತಿಥಿಗಳು ಬಂದಾಗ ಈ ಮೊಟ್ಟೆ ಬಿರಿಯಾನಿ ಮಾಡಿ ಕೊಡಿ. ಎಲ್ಲರೂ ಬಾಯಿಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವಿಲ್ಲ. ಮೊಟ್ಟೆ ಬಿರಿಯಾನಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಅಕ್ಕಿ (ಬಾಸ್ಮತಿ)- 2 ಕಪ್, ಮೊಟ್ಟೆ- 4, ಬಿರಿಯಾನಿ ಎಲೆ- 2, ಏಲಕ್ಕಿ- 4, ಲವಂಗ- 2, ನಕ್ಷತ್ರ ಹೂವು- 1, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದೂವರೆ ಚಮಚ, ಹಸಿಮೆಣಸಿನಕಾಯಿ- 4, ಈರುಳ್ಳಿ- 3, ಟೊಮೆಟೊ- 1, ಅರಶಿನ- ಅರ್ಧ ಚಮಚ, ಮೆಣಸಿನ ಪುಡಿ- 1 ಚಮಚ, ಕೊತ್ತಂಬರಿ ಪುಡಿ- 1 ಚಮಚ, ಬಿರಿಯಾನಿ ಪುಡಿ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ- ಅಗತ್ಯಕ್ಕೆ ತಕ್ಕಷ್ಟು, ಮೊಸರು- ಅರ್ಧ ಕಪ್, ಕೊತ್ತಂಬರಿ ಸೊಪ್...