Bengaluru, ಫೆಬ್ರವರಿ 23 -- ಬೆಂಗಳೂರು: ಮನೆ ಮತ್ತು ಫ್ಲಾಟ್‌ ಗಳನ್ನು ಬಾಡಿಗೆ ಮತ್ತು ಭೋಗ್ಯಕ್ಕೆ ನೀಡುವುದಾಗಿ ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಖಲೀಲ್‌ ಷರೀಫ್‌ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಸಯದ್‌ ಅಹಮದ್‌ ಹುಸೇನ್‌ ತಲೆ ಮರೆಸಿಕೊಂಡಿದ್ದಾನೆ. ಬಾಡಿಗೆದಾರರು ಮತ್ತು ಭೋಗ್ಯದಾರರಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದಾರೆ. ಬೆಂಗಳೂರಿನ ಹತ್ತಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳಲ್ಲಿ ಇವರ ವಿರುದ್ಧ ದೂರು ದಾಖಲಾಗಿತ್ತು. ನಂತರ ಈ ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಆರೋಪಿಗಳು ಟಾಂಜನೈಟ್‌ ಇಂಡಿಯಾ ಕಂಪನಿ ಹೆಸರಿನಲ್ಲಿ ಕಂಪನಿ ಸ್ಥಾಪಿಸಿಕೊಂಡಿದ್ದು ವಂಚಿಸುತ್ತಿದ್ದರು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ

ನಗರದಲ್ಲಿ ಖಾಲಿ ಇರುವ ಮನೆ ,ಮತ್ತು ಅಪಾರ್ಟ್‌ ಮೆಂಟ್‌ ಗಳ ವಿವರ ಪಡೆಯುತ್ತಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಮನೆ ಖಾಲಿ ಇರುವುದಾಗಿ ಜಾಹೀರಾತು ನೀಡುತ್ತಿದ್ದರು. ನಂತರ ಮನೆ ಅಥವಾ ಫ್ಲ್ಯಾಟ್ ಒಪ್ಪಿಗೆ ಆದಲ್ಲಿ ಬ...