ಭಾರತ, ಮಾರ್ಚ್ 4 -- ಮಂಗಳೂರು: ಕರಾವಳಿಯಲ್ಲಿ ಬಿಸಿ ಗಾಳಿ (ಹೀಟ್ ವೇವ್) ಮನುಷ್ಯರನ್ನು ಹೈರಾಣಾಗಿಸುತ್ತಿರುವುದು ಪ್ರತ್ಯಕ್ಷವಾಗಿ ಕಾಣುತ್ತಿದೆ. ಆದರೆ ಮೀನುಗಳಿಗೂ ಇದರ ಶಾಖ ತಟ್ಟಿದೆಯೇ? ಹೌದು ಎನ್ನುತ್ತಾರೆ ಮೀನುಗಾರರು. ಕಳೆದ ಒಂದು ವಾರದಿಂದ ಕರಾವಳಿಯಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ಹೀಟ್ ವೇವ್ ಅಬ್ಬರದ ಪರಿಣಾಮ, ಮೀನುಗಾರಿಕೆ, ಹೈನುಗಾರಿಕೆಗೆ ಇದರ ಬಿಸಿ ತಟ್ಟಿದೆ. ಮೀನುಗಾರಿಕೆಗೆ ಹೋದವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಬೋಟುಗಳನ್ನು ದಡದಲ್ಲೇ ನಿಲ್ಲಿಸಿದರೇ ಒಳ್ಳೆಯದು ಎಂಬ ಲೆಕ್ಕಾಚಾರದಲ್ಲಿ ಮೀನುಗಾರರು ಇದ್ದಾರೆ.

ಈ ಕುರಿತು ಮಾತನಾಡಿದ ಮೀನುಗಾರಿಕೆಯಲ್ಲಿ ದುಡಿಯುತ್ತಿರುವ ರಾಜೇಶ್ ಪುತ್ರನ್, ಆಳಸಮುದ್ರ ಮೀನುಗಾರಿಕೆಗೆ ಹೋದಾಗ ಬಹಳ ದಿನ ನೀರಿನಲ್ಲೇ ಉಳಿಯಬೇಕಾಗುತ್ತದೆ. ಕಳೆದೊಂದು ವಾರದಿಂದ ಸರಿಯಾಗಿ ಮೀನು ಸಿಗುತ್ತಿಲ್ಲ. ಬೋಟಿಗೆ ಹಾಕುವ ಡೀಸೆಲ್, ಕೆಲಸಗಾರರಿಗೆ ನೀಡುವ ಸಂಬಳವೆಂದು ದೊಡ್ಡ ಮೊತ್ತ ವ್ಯಯವಾಗುತ್ತಿದೆ. ಅದಕ್ಕೆ ತಕ್ಕಂತೆ ಆದಾಯ ಸಿಗುತ್ತಿಲ್ಲ. ಈ ಕಾರಣದಿಂದ ಸದ್ಯಕ್...