ಭಾರತ, ಮೇ 6 -- ಅರ್ಥ: ಈ ಕಾರ್ಯಕ್ಷೇತ್ರ ಮತ್ತು ಅದರ ಸ್ವರೂಪ, ಅದರಲ್ಲಿ ಆಗುವ ಬದಲಾವಣೆಗಳು, ಅದು ಹೇಗೆ ಉತ್ಪತ್ತಿಯಾಯಿತು? ಕಾರ್ಯಕ್ಷೇತ್ರವನ್ನು ಬಲ್ಲವನು ಯಾರು ಮತ್ತು ಅವನ ಪ್ರಭಾವಗಳು ಯಾವುವು ಎನ್ನುವುದನ್ನು ಕುರಿತು ನನ್ನ ಸಂಕ್ಷಿಪ್ತವಾದ ವಿವರಣೆಯನ್ನು ಕೇಳು.

ಭಾವಾರ್ಥ: ಕಾರ್ಯಕ್ಷೇತ್ರ ಮತ್ತು ಕಾರ್ಯಕ್ಷೇತ್ರವನ್ನು ತಿಳಿದವನು ಇವುಗಳ ಸಹಜ ಸ್ವರೂಪವನ್ನು ಇಲ್ಲಿ ಪ್ರಭುವು ವರ್ಣಿಸುತ್ತಿದ್ದಾನೆ. ಈ ದೇಹದ ರಚನೆ ಎಂತಹುದು, ಅದನ್ನು ಯಾವ ವಸ್ತುಗಳಿಂದ ಮಾಡಿದೆ, ಯಾರ ನಿಯಂತ್ರಣದಲ್ಲಿ ಈ ದೇಹವು ಕೆಲಸ ಮಾಡುತ್ತಿದೆ, ಬದಲಾವಣೆಗಳು ಹೇಗೆ ಆಗುತ್ತವೆ, ಬದಲಾವಣೆಗಳ ಮೂಲ ಯಾವುದು, ಅವುಗಳ ಕಾರಣಗಳೇನು, ವ್ಯಕ್ತಿಗತ ಆತ್ಮನ ಪರಮಗುರಿ ಯಾವುದು ಮತ್ತು ವ್ಯಕ್ತಿಗತ ಆತ್ಮದ ವಾಸ್ತವಿಕ ರೂಪವೇನು ಇವುಗಳನ್ನು ತಿಳಿದುಕೊಳ್ಳಬೇಕು. ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮನ ನಡುವಣ ವ್ಯತ್ಯಾಸ, ಅವರ ಭಿನ್ನ ಪ್ರಭಾವಗಳು, ಅವರ ಸುಪ್ತಶಕ್ತಿಗಳು ಇವನ್ನೂ ತಿಳಿದುಕೊಳ್ಳಬೇಕು. ದೇವೋತ್ತಮ ಪರಮ ಪುರುಷನು ಕೊಟ್ಟಿರುವ ವರ್ಣನೆಯಿಂದ ಭಗವದ್ಗೀತೆಯನ್...