ಭಾರತ, ಮಾರ್ಚ್ 5 -- ಕರ್ನಾಟಕದಲ್ಲಿ ಸ್ಥಾಪಿತ ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರದ ನಿರ್ಣಯದ ವಿರುದ್ಧ ಹೋರಾಟ ಮುಂದುವರೆದಿದೆ. ಗ್ರಾಮೀಣ ಮತ್ತು ಬಡ ಕುಟುಂಬಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ್ತು ಗುಣಾತ್ಮಕ ಶಿಕ್ಷಣದ ನಿರ್ವಹಣೆಗಾಗಿ ರೂಪಿಸಿದ ವಿಶ್ವವಿದ್ಯಾಲಯಗಳ ಅಸ್ತಿತ್ವಕ್ಕಾಗಿ ನಡೆಸಿರುವ ಹೋರಾಟದ ಮುಂದಾಳತ್ವದಲ್ಲಿ ಬಹುತೇಕ ವಿದ್ಯಾರ್ಥಿಗಳದ್ದೇ ಮೇಲುಗೈ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ನಡೆಸುತ್ತಿದ್ದಾರೆ. ವಿರೋಧ ಪಕ್ಷದ ರಾಜಕಾರಣಿಗಳು ಈ ಕುರಿತು ತಮ್ಮ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇವರೊoದಿಗೆ ಆಡಳಿತರೂಢ ಪಕ್ಷದ ರಾಜಕಾರಣಿಗಳು ಬಹಿರಂಗವಾಗಿ ಅಲ್ಲದಿದ್ದರೂ ಸರ್ಕಾರದ ನಿರ್ಣಯದ ಕುರಿತು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಖಾಸಗಿ ವಿಶ್ವವಿದ್ಯಾಲಯದವರಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ಭಾದಿಸುವುದಿಲ್ಲವಾದ್ದರಿಂದ ಅವರು ನಿರ್ಲಿಪ್ತರು. ಆದರೆ ಅದೇಕೋ ಶಿಕ್ಷಕ ವರ್ಗ ಬಹುತೇಕ ತಟಸ್ಥವಾಗಿದೆ ಎಂದೆನಿಸುತ್ತಿದೆ. ಕಾರಣ ಬೆರಳೆಣಿಕೆಯ ...
Click here to read full article from source
To read the full article or to get the complete feed from this publication, please
Contact Us.