ಭಾರತ, ಮಾರ್ಚ್ 2 -- ನಿಮಗೂ ಹೀಗಾಗಿದ್ಯಾ?. ಒಂದು ಪದವನ್ನು ಬಹಳ ಸಲ ನೋಡಿದ್ದೀರಿ, ಅದರ ಉಪಯೋಗ ಗೊತ್ತಿದೆ, ಆದರೂ ಇದ್ದಕ್ಕಿದ್ದಂತೆ ಆ ಪದ ಅರ್ಥವೇ ಆಗುತ್ತಿಲ್ಲ ಅಂತ ಅನ್ನಿಸುವುದು ಅಥವಾ ನಿಮಗೆ ಯಾವುದೋ ಪದ ಬೇಕು ಅದು ಎಷ್ಟು ಸಲ ನೆನಪಿಸಿಕೊಂಡರೂ ಬಾಯಿಗೆ ಬರುತ್ತಿಲ್ಲ, ಸೂತ್ರ ಹರಿದ ಗಾಳಿಪಟದಂತೆ ಕೈಗೆ ಸಿಗುತಿಲ್ಲ ಅನಿಸುತ್ತಿರುವುದು, ನೀವ್ಯಾವುದೋ ದೃಶ್ಯ ನೋಡಿ ಇದು ನನಗೆ ಕನಸಲ್ಲಿ ಬಂದಿತ್ತು ಎಂದು ಆಶ್ಚರ್ಯ ಪಡುತ್ತಿರುವುದು.

ಮನುಷ್ಯನ ಮನಸ್ಸು ಒಬ್ಬ ಜಾದೂಗಾರನಂತೆ. ನಮ್ಮನ್ನು ವಿಸ್ಮಯ, ಗೊಂದಲ ಅಥವಾ ಹತಾಶೆಗೆ ದೂಡಬಲ್ಲಂತಹ ಭ್ರಮೆಗಳನ್ನು ಹುಟ್ಟು ಹಾಕುತ್ತದೆ. ಸಮಯವನ್ನು ಬೆಂಡ್ ಮಾಡಿಸುವಷ್ಟು ವಾಸ್ತವವನ್ನು ಮಸುಕಾಗಿಸುತ್ತದೆ. ಇವೆಲ್ಲವೂ ನಮ್ಮ ಅನುಮತಿಯಿಲ್ಲದೆ ನಮ್ಮ ಅರಿವಿಗೂ ಬಾರದಂತೆ ನಡೆಯುವ ಪ್ರಕ್ರಿಯಗಳು.

ಡೆಜಾ ವು (ಈಗಾಗಲೇ ನೋಡಿರುವ ಕೇಳಿರುವಂತಹ ಭ್ರಮೆ) ಬಹಳ ಜನರಿಗೆ ಚಿರಪರಿಚಿತ. ಆದರೆ ಅದರದ್ದೇ ಆದ ಸೋದರ ಸಂಬಂಧಿಗಳಾದ ಜಮೈಸ್ ವು, ಪ್ರೆಸ್ಕ್ಯೂ ವು ಮತ್ತು ಡೆಜಾ ರೇವೆ ಡೇಜಾವುವಿನಷ್ಟೇ ಕುತೂಹಲಕಾರಿ....