Bengaluru, ಫೆಬ್ರವರಿ 25 -- ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣ: ಪ್ರಶ್ನೆ- ಪರೀಕ್ಷೆಯ ಸಮಯ ಬಂದಿದೆ. ಮನೆ ಮತ್ತು ಶಾಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಭಯವು ಪರೀಕ್ಷೆಯ ಪರ್ಯಾಯವಾಗಿಬಿಟ್ಟಿದೆ. ಅಷ್ಟರಮಟ್ಟಿಗೆ ಭಯವು ಮಕ್ಕಳು ಹಾಗೂ ಪೋಷಕರನ್ನು ಆವರಿಸಿಕೊಂಡಿದೆ. ಹಾಗಾದರೆ, ಈ ಭಯವೆನ್ನುವುದು ಅಷ್ಟು ಅಹಿತಕರವೇ? ಅಪಾಯವೇ ಅಥವಾ ಅನಿವಾರ್ಯವೇ ? ಪರೀಕ್ಷೇ ಭಯದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಸಾಧ್ಯವೇ?

ಉತ್ತರ: ಖಂಡಿತವಾಗಿಯೂ ಭಯವು ಸ್ವಾಭಾವಿಕ ಮತ್ತು ಸಹಜವಾದ ಭಾವನೆಗಳಲ್ಲಿ ಒಂದು. ಭಯವೇ ಇಲ್ಲದಿದ್ದರೆ ಯಾವ ಜೀವಿಯೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ತನ್ನನ್ನು ತಾನು ಅಪಾಯಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ, ಪರೀಕ್ಷೆಯ ಭಯವು ಸಹ ಅಷ್ಟೇ ಸಹಜ. ಆದರೆ, ಪರೀಕ್ಷೆ ಅಪಾಯವಲ್ಲ, ಹಾಗಾದರೆ ಭಯವೇಕೆ ಆಗಬೇಕೆಂದು ನೀವು ಯೋಚಿಸಿದರೆ, ಇದಕ್ಕೆ ಉತ್ತರವಿಷ್ಚೇ, ಪರೀಕ್ಷೆಯಲ್ಲಿ ಸೋಲು, ಗೆಲುವು ಇರುತ್ತದೆ ಮತ್ತು ಪರೀಕ್ಷೆಯ ನಿರ್ದಿಷ್ಟ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಯೋಗ್ಯತೆ ಮತ್ತು ಬುದ್ಧಿವಂತಿಕೆಯ...