ಭಾರತ, ಮಾರ್ಚ್ 28 -- ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣ: ಸಾಮಾನ್ಯವಾಗಿ ಅರೇಂಜ್ ಮ್ಯಾರೇಜಿನಲ್ಲಿ ಗಂಡು ಮತ್ತು ಹೆಣ್ಣು ನಡುವಿನ ಸಂಬಂಧವನ್ನು ದಾಂಪತ್ಯ ಜೀವನದ ಕಡೆಗೆ ಬೆಳೆಸುವುದಕ್ಕೆ ಇಬ್ಬರಲ್ಲೂ ಇರುವ ಕೆಲವು ಸ್ಥಿತಿಗತಿಗಳ ಮತ್ತು ಗುಣಗಳ ಹೊಂದಾಣಿಕೆ ನೋಡುತ್ತಾರೆ. ಗಂಡು ಮತ್ತು ಹೆಣ್ಣಿನ ವಿದ್ಯಾಭ್ಯಾಸ, ಉದ್ಯೋಗ, ಹಣಕಾಸಿನ ವ್ಯವಸ್ಥೆ ಮತ್ತು ಕುಟುಂಬದ ಸ್ಥಿತಿಗತಿಗಳನ್ನು ಪರಿಗಣಿಸುತ್ತಾರೆ. ಗಂಡ ಹೆಣ್ಣಿನ ಸೌಂದಯ೯ವನ್ನೂ ಸಹ ಮ್ಯಾಚ್ ಮಾಡುತ್ತಾರೆ.

ಇನ್ನು ಪ್ರೀತಿಸಿ ವಿವಾಹವಾಗುವವರ ಪೈಕಿ, ಒಬ್ಬರನ್ನೊಬ್ಬರು ಎಷ್ಟು ಪ್ರೇಮಿಸುತ್ತಾರೆಂದು ನೋಡಿ ವಿವಾಹವಾಗುತ್ತಾರೆ. ಈ ರೀತಿಯಾಗಿ ಗಂಡು ಹೆಣ್ಣಿನ ಹೊಂದಾಣಿಕೆ ಮಾಡುವುದು ಎಷ್ಟು ಸರಿಯೇ? ಇನ್ನಾವ ರೀತಿಯಲ್ಲಿ ಮಾಡಬಹುದು ಎಂದು ನೀವು ಯೋಚಿಸುತ್ತಿರಬಹುದಲ್ಲವೇ? ಇದಕ್ಕೆ ಉತ್ತರ ಖಂಡಿತವಾಗಿಯೂ ನೀಡುತ್ತೇನೆ. ಆದರೆ ಇದಕ್ಕೂ ಮುಂಚೆ ಒಮ್ಮೆ ಆಲೋಚಿಸಿ ನೋಡಿ. ಇಲ್ಲಿ ಹೇಳಿದ ನಿಜವಾಗಿಯೂ ಈ ಎಲ್ಲಾ ಅಂಶಗಳು ದಾಂಪತ್ಯ ಜೀವನಕ್ಕೆ ಕಾಲಿಡುವ ಗಂಡು ಹೆಣ್ಣಿನ ಹೊಂದಾಣಿಕೆಯನ್ನು ಮಾಡ...