ಭಾರತ, ಏಪ್ರಿಲ್ 27 -- ಬೆಂಗಳೂರು: ಮಾವಿನ ಹಣ್ಣಿನ ಸುಗ್ಗಿ ಶುರುವಾಗಿದೆ. ಹಣ್ಣುಗಳ ರಾಜ ಎನಿಸಿಕೊಂಡ ಮಾವು ಮಾರುಕಟ್ಟೆ ದಾಪುಗಾಲಿಟ್ಟಿದ್ದು, ನೀವು ಕೂಡ ಅಂಚೆಯ ಮೂಲಕ ಮನೆ ಬಾಗಿಲಿಗೆ ಮಾವು ತರಿಸಿಕೊಳ್ಳಬಹುದು. ಅದಕ್ಕಾಗಿ ಆನ್​​ಲೈನ್​ನಲ್ಲಿ ಆರ್ಡರ್​ ಮಾಡಬೇಕಷ್ಟೆ. ಆದರೆ ಇದೀಗ ಮಾವು ಬೆಳೆಗಾರರಿಗೂ ಗುಡ್​​ನ್ಯೂಸ್​ ಸಿಕ್ಕಿದೆ. ತಾವು ಬೆಳೆದ ಮಾವನ್ನು ಮುಂಬೈ, ದೆಹಲಿಗೂ ಅಂಚೆ ಮೂಲಕವೇ ತಲುಪಿಸಬಹುದು.

ನಗರದ ಜನರಲ್ ಪೋಸ್ಟ್ ಆಫೀಸ್ (GPO) ಈ ಋತುವಿನಲ್ಲಿ ಮುಂಬೈ ಮತ್ತು ದೆಹಲಿಗೆ ಕರ್ನಾಟಕದ ಮಾವಿನ ಹಣ್ಣುಗಳನ್ನು ತಲುಪಿಸಲಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಪ್ರಕಟಿಸಿದ್ದಾರೆ. 2019ರಲ್ಲಿ ಪ್ರಾರಂಭವಾದ ಈ ಉಪಕ್ರಮವು ಇಂಡಿಯಾ ಪೋಸ್ಟ್‌ನ ಬೆಂಗಳೂರು ಜಿಪಿಒ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ನಡುವಿನ ಸಹಯೋಗವಾಗಿದೆ.

ಇಲ್ಲಿಯವರೆಗೆ, ಇದು ಒಂದು ಲಕ್ಷಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ 3.51 ಲಕ್ಷ ಕೆಜಿ ಮಾವಿನಹಣ್ಣನ್ನು ತಲುಪಿ...