Bangalore, ಏಪ್ರಿಲ್ 29 -- ಸಣ್ಣ ಪಟ್ಟಣಗಳಲ್ಲಿ ಲಾಡ್ಜ್‌ಗಳಲ್ಲಿ, ಹೋಟೆಲ್‌ ರೂಂಗಳಲ್ಲಿ ವಾಸಿಸುವುದು ಕೆಲವೊಮ್ಮೆ ಅಸುರಕ್ಷಿತವಾಗಿರಬಹುದು. ಮಧ್ಯರಾತ್ರಿ ಬಾಗಿಲು ಬಡಿಯಬಹುದು, ಯಾರೋ ಬಾಗಿಲು ತೆರೆದು ಒಳಗೆ ಪ್ರವೇಶಿಸಬಹುದು. ಇಂತಹ ಅನುಭವವನ್ನು ಬಾಲಿವುಡ್‌ನ ಖ್ಯಾತ ನಟಿ ಮೌನಿ ರಾಯ್‌ ಹಂಚಿಕೊಂಡಿದ್ದಾರೆ. ಬಾಲಿವುಡ್‌ ನಟಿ ಸದ್ಯ ತನ್ನ ಮುಂಬರುವ ಸಿನಿಮಾ ಭೂತ್‌ನಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಇವರು ತನ್ನ ಬದುಕಿನಲ್ಲಿ ನಡೆದ ಭಯಾನಕ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಸಣ್ಣ ಪಟ್ಟಣವೊಂದರಲ್ಲಿ ಲಾಡ್ಜ್‌ ರೂಂನಲ್ಲಿದ್ದಾಗ ಆ ಕೊಠಡಿಯ ಕೀಯನ್ನು ತೆರೆಯಲು ಮಧ್ಯರಾತ್ರಿಯಲ್ಲಿ ಆಗುಂತಕನೊಬ್ಬ ಪ್ರಯತ್ನಿಸಿದ್ದಾನೆ. ಭಯದಿಂದ ಇವರು ಜೋರಾಗಿ ಕಿರುಚಿದ್ದಾರೆ. ತನಗಾದ ಆ ಅನುಭವವನ್ನು ಬಾಲಿವುಡ್‌ ಬಬಲ್‌ ಚಾನೆಲ್‌ ಜತೆ ಹಂಚಿಕೊಂಡಿದ್ದಾರೆ.

"ನಾನು ಆಗ ಸಣ್ಣ ಪಟ್ಟಣದಲ್ಲಿದ್ದೆ. ಯಾವ ನಗರ ಎಂದು ನನಗೆ ಖಚಿತವಾಗಿ ಈಗ ನೆನಪಿಗೆ ಬರುತ್ತಿಲ್ಲ. ಹೀಗಾಗಿ ತಪ್ಪಾಗಿ ಬೇರೆ ಊರಿನ ಹೆಸರು ಹೇಳಲು ಬಯಸುವುದಿಲ್ಲ. ಯಾರೋ ನಮ್...