ಭಾರತ, ಮಾರ್ಚ್ 22 -- ಮಂಗಳೂರು: ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಧುವಾಹಿನಿಯ ತಟದಲ್ಲಿ ಪುನಃ ನಿರ್ಮಾಣಗೊಂಡಿರುವ ಮಧೂರು ಶ್ರೀ ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ - ಮೂಡಪ್ಪಸೇವೆಯ ಸಂಭ್ರಮದಲ್ಲಿದೆ. ಹತ್ತೂರಿನ ಕಡೆಗಳಲ್ಲಿ ಮಧೂರು ಬ್ರಹ್ಮಕಲಶೋತ್ಸವದ ಸಂಭ್ರಮದ ಚರ್ಚೆ ನಡೆಯುತ್ತಿದೆ.

ಮಧೂರು ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಮೂಡಪ್ಪ ಸೇವೆ ಅತ್ಯಂತ ವಿಶೇಷವಾದ ಸೇವೆ. ಹೀಗಾಗಿ ಇಲ್ಲಿ ಮೂಡಪ್ಪ ಸೇವೆಯನ್ನು ಸಲ್ಲಿಸಲೆಂದೇ ಹರಕೆ ಹೊತ್ತು ದೂರದೂರುಗಳಿಂದ ಜನರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೊಸರೂಪ ನೀಡುವ ಬ್ರಹ್ಮಕಲಶೋತ್ಸವ , ಜೀರ್ಣೋದ್ಧಾರ ಕಾರ್ಯಗಳು ಕೆಲ ವರ್ಷಗಳಿಂದ ನಡೆಯುತ್ತಿದ್ದು, ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮಾರ್ಚ್ 27ರಿಂದ ಆರಂಭಗೊಂಡು ಏಪ್ರಿಲ್ 7ರವರೆಗೆ ಮಧೂರು ಬ್ರಹ್ಮಕಲಶೋತ್ಸವ ನಡೆಯಲಿದೆ.

ದಿನನ...