ಭಾರತ, ಮಾರ್ಚ್ 27 -- Madhur Temple Brahmakalashotsava: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಧಾರ್ಮಿಕ ಕಾರ್ಯಗಳಿಗೆ ಹಾಗೂ ಭೋಜನ ವ್ಯವಸ್ಥೆಗೆ ಸ್ಥಳೀಯ ಕಾರ್ಯಾಡು ಕಾಲೊನಿಯ ನುರಿತರಿಂದ ಬುಟ್ಟಿ ತಯಾರಿಸಿ ಸಮರ್ಪಿಸಲಾಯಿತು. ಸುಮಾರು 400ಕ್ಕೂ ಅಧಿಕ ಬುಟ್ಟಿಗಳನ್ನು ಬದಿಯಡ್ಕ ಸಮೀಪದ ಪಳ್ಳತ್ತಡ್ಕ ದಂಬೆಮೂಲೆಯಲ್ಲಿ ನುರಿತ ಕಾರ್ಮಿಕರು ತಯಾರಿಸಿದ್ದರು.

ಕಾರ್ಯಾಡು ಕಾಲನಿಯ ಬುಟ್ಟಿ ಹೆಣೆಯುವ ಕಾರ್ಮಿಕರ ಸಹಕಾರದಿಂದ ಕಳೆದ ಒಂದು ತಿಂಗಳ ಕಾಲ 400ಕ್ಕೂ ಅಧಿಕ ಬುಟ್ಟಿಗಳನ್ನು ತಯಾರಿಸಲಾಗಿತ್ತು. ಇದಕ್ಕಾಗಿ ವಿವಿಧ ಸ್ಥಳಗಳಿಂದ ಆಯ್ದ ಕಾಡುಬಳ್ಳಿಗಳನ್ನು ತಂದು ಉಪಯೋಗಿಸಲಾಗಿದೆ. ಹೆಣೆದ ಬುಟ್ಟಿಗಳನ್ನು ಬಿಸಿಲಿಗೆ ಒಣಗಿಸಿ, ವಾಹನದ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿಸಲಾಯಿತು. ಬುಟ್ಟಿಯೊಂದಕ್ಕೆ ರೂಪಾಯಿ 300ರಂತೆ ವೆಚ್ಚ ತಗುಲಿದ್ದು, ಅದನ್ನು ಭಗವದ್ಭಕ್ತರು ನಗದು ರೂಪದಲ್ಲಿ ನೀಡಿದ್ದರು. ನಾರಾಯಣ ಭಟ್ಟ ಎಂಬವರ ನೇತೃತ್ವದಲ್ಲಿ ಕಾರ್ಯಾಡು ಕಾಲನಿಯ ಬಟ್ಯ ಎಂಬವರ ಜೊತೆಯಲ...