ಭಾರತ, ಏಪ್ರಿಲ್ 1 -- ನೆರೆಯ ಕೇರಳದ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಸಂಭ್ರಮ ಜೋರಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿ ಹಲವು ವರ್ಷಗಳ ನಂತರ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಇತ್ತೀಚೆಗೆ ಇಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ ಅವರು, ವೇದಿಕೆಯಲ್ಲೇ ಹಲವು ವಿಷಯಗಳ ಕುರಿತು ಅಸಮಾಧಾನ ಹೊರಹಾಕಿದ್ದರು. ಜಿಲ್ಲೆಯ ಪ್ರಮುಖ ದೇವಸ್ಥಾನವೊಂದರ ಬ್ರಹ್ಮಕಲಶ ಕಾರ್ಯಕ್ರಮ ತಡವಾಗಿದ್ದರ ಬಗ್ಗೆ ಅವರು ಮಾತನಾಡಿರುವ ವಿಡಿಯೋ ತುಣುಕುಗಳು ವೈರಲ್‌ ಆಗಿವೆ. ಅವರ ಮಾತುಗಳನ್ನು ಕೃಷ್ಣ ಭಟ್‌ ಅವರು ಫೇಸ್‌ಬುಕ್‌ ಪೋಸ್ಟ್‌ ಮೂಲಕ ಹೇಳಿಕೊಂಡಿದ್ದಾರೆ. ಇಲ್ಲಿರುವುರು ಕೃಷ್ಣ ಭಟ್‌ ಅವರ ಬರಹ.

ಕಾಸರಗೋಡು ಜಿಲ್ಲೆಯಲ್ಲೇ ಅತಿ ಹೆಚ್ಚು ಆದಾಯವಿರುವ, ಎ ಗ್ರೇಡ್ ದೇವಾಲಯ ಎಂದರೆ ಎಂದರೆ ಮಧೂರು ದೇವಸ್ಥಾನ. ಇಂಥಾ ದೇವಸ್ಥಾನದ ದೇವರನ್ನು 14 ವರ್ಷ ಬಾಲಾಲಯ...