ಭಾರತ, ಮಾರ್ಚ್ 29 -- Madhur Madanantheshwara Temple: ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಕಾರ್ಯಕ್ರಮಗಳು ಆರಂಭಗೊಂಡಿವೆ. ಮಹಾದ್ವಾರ ರಾಜಗೋಪುರ ಮತ್ತು ರಾಜಾಂಗಣ ಲೋಕಾರ್ಪಣೆ ಈಗಾಗಲೇ ನಡೆದಿದೆ. ಗುರುವಾರ, ಶುಕ್ರವಾರ ಮತ್ತು ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಈಗಾಗಲೇ ಪ್ರತಿದಿನವೂ ನೂರಾರು ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಭಾನುವಾರ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ.

ಬೆಳಗ್ಗೆ 9.10 ರಿಂದ 11ರೊಳಗೆ ಶ್ರೀ ಮದನಂತೇಶ್ವರ ದೇವರ ಪ್ರಾಸಾದಕ್ಕೆ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಷಕ, ಅಷ್ಟಬಂಧ ಪ್ರತಿಷ್ಠೆ,. ಪ್ರಧಾನ ವೇದಿಕೆಯಲ್ಲಿ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಮೀಕ್ಷಾ ಆಚಾರ್ಯ, ಸುಗುಣಾ ಆಚಾರ್ಯರಿಂದ ಭಕ್ತಿ ಸಂಗೀತ. 9.30ಕ್ಕೆ ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಸ್ವಾಗ...