ಭಾರತ, ಮಾರ್ಚ್ 5 -- ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ಗೆ ಎರಡನೇ ಮದುವೆ ಪ್ರಸಂಗ ಮುಂದುವರೆದಿದೆ. ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಹೆಣ್ಣು ನೋಡುವ ಕಾರ್ಯಕ್ರಮದಂತೆ ಗೌತಮ್‌ ಮತ್ತು ಮಧುರಾಳ ಭೇಟಿಯಾಗಿದೆ. ಮಧುರಾಳನ್ನು ಗೌತಮ್‌ ಮನಸ್ಸು ಬಿಚ್ಚಿ ಹೊಗಳಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ಗೆ ಎರಡನೇ ಮದುವೆ ಪ್ರಸಂಗದ ಕುರಿತು ಕಿರುತೆರೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರುಬರುತ್ತಾ ರಾಯರ ಕುದುರೆ ಕತ್ತೆ ಆಯಿತು ಎಂದು ಅಮೃತಧಾರೆಯನ್ನು ಟೀಕಿಸುತ್ತಿದ್ದಾರೆ. ಭೂಮಿಕಾಳಂತಹ ಗಟ್ಟಿ ಪಾತ್ರವನ್ನು ಹಾಳು ಮಾಡಿದ್ದಾರೆ ಎನ್ನುತ್ತಿದ್ದಾರೆ.

ಭೂಮಿಕಾ ಎಂಬ ಸ್ಟ್ರಾಂಗ್‌ ಕ್ಯಾರೆಕ್ಟರ್‌ ಅನ್ನು ದುರ್ಬಲವಾಗಿಸಿ, ಆಕೆಯ ಕೈಯಿಂದಲೇ ಗೌತಮ್‌ಗೆ ಇನ್ನೊಂದು ಮದುವೆ ಮಾಡಿಸುವ ಕಥೆಯನ್ನು ಒಪ್ಪಲು ಯಾರೂ ರೆಡಿ ಇಲ್ಲ. ಮದುವೆಯಾಗಿ ಮಕ್ಕಳಾಗದೆ ಇದ್ದಾಗ ಇನ್ನೊಂದು ಮದುವೆ ಮಾಡುವುದೇ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

ಕಳೆದ ಕೆಲ...