ಭಾರತ, ಮಾರ್ಚ್ 4 -- ಸಪೋಟ ಹಣ್ಣುಗಳು ವರ್ಷಪೂರ್ತಿ ಲಭ್ಯವಿರುವ ಹಣ್ಣಲ್ಲ. ಋತುಮಾನಕ್ಕನುಗುಣವಾಗಿ ಈ ಹಣ್ಣು ಲಭ್ಯವಿರುತ್ತದೆ. ಸಪೋಟ ಹಣ್ಣು ಈಗ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಹಣ್ಣು. ಈ ಹಣ್ಣನ್ನು ನೋಡಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಯಾಕೆಂದರೆ ಅಷ್ಟು ರುಚಿಯಾಗಿರುತ್ತದೆ ಈ ಹಣ್ಣು. ಆದರೆ, ಮಧುಮೇಹ ರೋಗಿಗಳು ತಾವು ತಿನ್ನುವ ಯಾವುದೇ ಆಹಾರವನ್ನು ಅದರ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಅದರಲ್ಲಿರುವ ನೈಸರ್ಗಿಕ ಸಕ್ಕರೆಗಳನ್ನು ತಿಳಿದುಕೊಂಡ ನಂತರವೇ ತಿನ್ನಬೇಕು. ಹೀಗಾಗಿ ಮಧುಮೇಹಿಗಳು ಸಪೋಟ ತಿನ್ನಬಹುದೇ ಅಥವಾ ಇಲ್ಲವೇ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಪೋಟ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವು ತಿಂದ ತಕ್ಷಣ ತ್ವರಿತ ಶಕ್ತಿಯನ್ನು ಒದಗಿಸುತ್ತವೆ. 100 ಗ್ರಾಂ ಸಪೋಟದಲ್ಲಿ ಕಾರ್ಬೋಹೈಡ್ರೇಟ್‌, ಕ್ಯಾಲೋರಿ, ಸಕ್ಕರೆ, ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಹಾಗೆಯೇ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಬಿ ಕಾಂಪ್ಲೆಕ್ಸ್‌, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯ...