ಭಾರತ, ಮಾರ್ಚ್ 24 -- ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಮಧುಬಲೆ ಪ್ರಯತ್ನ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಹನಿಟ್ರ್ಯಾಪ್‌ (Honey Trap Issue) ಹಿಂದಿನ ಕಾಣದ ಕೈ ಯಾರದ್ದು ಎನ್ನುವುದು ಸ್ಪಷ್ಟವಾಗಿಲ್ಲವಾದರೂ ಸಂಪುಟದಲ್ಲಿ ನಂ-2 ಸ್ಥಾನದಲ್ಲಿರುವ ಸಚಿವರತ್ತ ಬೊಟ್ಟು ಮಾಡಿ ತೋರಿಸಲಾಗುತ್ತದೆ. ಅವರ 'ಹಲೋ' ಹೇಳಿಕೆ ಅವರತ್ತಲೇ ಬೊಟ್ಟು ಮಾಡಿ ತೋರಿಸುತ್ತಿರುವುದು ಶಂಕೆಗೆ ಇಂಬು ನೀಡಿದೆ.

ಸಚಿವ ಕೆ. ಎನ್. ರಾಜಣ್ಣ ಮತ್ತು ಅವರ ಪುತ್ರ ವಿಧಾನಪರಿಸತ್‌ ಸದಸ್ಯ ರಾಜೇಂದ್ರ ರಾಜಣ್ಣ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಧುಬಲೆ ವಿವರಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಈ ವಿವಾದವನ್ನು ಪಕ್ಷದ ವರಿಷ್ಠ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವರಿಷ್ಠರ ಅಂಗಳಕ್ಕೆ ದಾಟಿಸಲು ಮುಂದಾಗಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಜೇಂದ್ರ ತಮ್ಮ ಮತ...