Bengaluru, ಫೆಬ್ರವರಿ 21 -- ಬಾಲಿವುಡ್ ಶೈಲಿಯ ಲೆಹೆಂಗಾ ವಿನ್ಯಾಸ:ಕೆಲವು ಹೆಣ್ಮಕ್ಕಳಿಗೆ ತಮ್ಮ ಆಪ್ತರಮದುವೆಗೆ ಲೆಹೆಂಗಾ ಧರಿಸುವ ಕ್ರೇಜ್ ಇರುತ್ತದೆ. ಸ್ವಂತ ಮದುವೆಯಾಗಿರಲಿ ಅಥವಾ ಒಡಹುಟ್ಟಿದವರ ಮದುವೆಯಾಗಿರಲಿ,ಪ್ರತಿಯೊಬ್ಬ ಹುಡುಗಿಯೂ ಸುಂದರವಾದ ಲೆಹೆಂಗಾ ಧರಿಸುವ ಕನಸು ಕಾಣುತ್ತಾಳೆ. ಮುಂಬರುವ ಮದುವೆ ಸೀಸನ್‌ಗೆ ನೀವು ಲೆಹೆಂಗಾ ಖರೀದಿಸಲು ಹೊರಟಿದ್ದರೆ,ಖಂಡಿತವಾಗಿಯೂ ಈ ಸುಂದರವಾದ ಬಾಲಿವುಡ್ ಶೈಲಿಯ ಲೆಹೆಂಗಾಗಳನ್ನು ಖರೀದಿಸಬಹುದು. ಇದು ನಿಮ್ಮ ಸೌಂದರ್ಯಕ್ಕೆ ಇಂಬು ನೀಡುತ್ತದೆ.

ಫಿಶ್ ಕಟ್ ಲೆಹೆಂಗಾ:ನೀವು ಇತ್ತೀಚಿನ ವಿನ್ಯಾಸದ ಲೆಹೆಂಗಾ ಧರಿಸಲು ಬಯಸಿದರೆ,ನಟಿಪ್ರಿಯಾಂಕಾ ಚೋಪ್ರಾ ಅವರು ಧರಿಸಿರುವ ಈ ಫಿಶ್ ಕಟ್ ವಿನ್ಯಾಸದ ಲೆಹೆಂಗಾವನ್ನು ಧರಿಸಬಹುದು. ಈ ಲುಕ್ ವಿಭಿನ್ನವಾಗಿ ಕಾಣುತ್ತದೆ.

ಸಣ್ಣ ಕುರ್ತಿ ಬ್ಲೌಸ್ ವಿನ್ಯಾಸ:ಲೆಹೆಂಗಾ ಜೊತೆಗೆ ಬೇರೆಯದೇ ಲುಕ್ ಬೇಕಾದರೆ ಚಿಕ್ಕ ಕುರ್ತಿ ಹೊಲಿದು ಧರಿಸಿ. ಪ್ರಿಯಾಂಕಾ ಚೋಪ್ರಾ ಅವರ ಈ ಹಳದಿ ಲುಕ್ ಟ್ರೆಂಡಿಯಾಗಿದ್ದು, ಸುಂದರವಾಗಿ ಕಾಣುತ್ತದೆ. ಇದನ್ನು ಅರಿಶಿನ ಶಾಸ್ತ...