ಭಾರತ, ಮಾರ್ಚ್ 22 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 21ರ ಸಂಚಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ನದಿ ದಡದಲ್ಲಿ ಒಂದಾದ ತಾಯಿ-ಮಗ ಮಾತನಾಡುತ್ತಿರುತ್ತಾರೆ. ಆಗ ವಿಶಾಲಾಕ್ಷಿ ಮದುವೆ ವಿಚಾರವನ್ನು ತನ್ನ ಬಳಿ ಏಕೆ ಹೇಳಿಲ್ಲ ಎಂದು ಅಳುತ್ತಾ ಮಗನನ್ನು ಪ್ರಶ್ನಿಸುತ್ತಾರೆ. ಆಗ ಸುಬ್ಬು 'ತಾನು ಮದುವೆ ಆಗುತ್ತಿರುವ ವಿಚಾರ ನನಗೂ ಗೊತ್ತಿರಲಿಲ್ಲ. ನಾನು ಶ್ರಾವಣಿ ಮೇಡಂ ಅನ್ನು ಪ್ರೀತಿಸಿಯೂ ಇಲ್ಲ. ನನಗೆ ದೊಡ್ಡ ಮನೆಯವರು ಎಂದರೆ ಅಭಿಮಾನ. ನಾನು ಅವರ ಸೇವೆಗೆ ಇರುವುದು ಎಂಬ ಭಾವನೆ ಇತ್ತು. ಯಜಮಾನರನ್ನು ನೋಡಿದ ಹಾಗೆ ಶ್ರಾವಣಿ ಮೇಡಂ ಅನ್ನು ಕೂಡ ನೋಡುತ್ತಿದ್ದೆ, ಆದರೆ ಇದೆಲ್ಲಾ ಯಾವ ಕಾರಣಕ್ಕೆ ಆಯ್ತು ಎಂಬುದು ಮಾತ್ರ ನನಗೆ ಅರ್ಥವಾಗ್ತಿಲ್ಲ. ನಾನು ಹಿಂದೆಯೂ ಅವರನ್ನು ಪ್ರೀತಿಸಿಲ್ಲ, ಮುಂದೆಯೂ ಪ್ರೀತಿಸುವುದಿಲ್ಲ. ನನ್ನನ್ನು ನಂಬು' ಎಂದು ತಾಯಿ ಬಳಿ ಇರುವ ಎಲ್ಲಾ ಸತ್ಯವನ್ನೂ ಹೇಳುತ್ತಾನೆ. ಇತ್ತ ಸತ್ಯ ಗೊತ್ತಿಲ್ಲದೇ ಮಗ ಮೇಲೆ ಕೋಪ ಮಾಡಿಕೊಂಡಿದ್ದಕ್ಕಾಗಿ ವಿಶಾಲಾಕ್ಷಿ ಪಶ...