ಭಾರತ, ಮಾರ್ಚ್ 1 -- ವಾರ ಭವಿಷ್ಯ: ಎಷ್ಟೋ ಜನರು ಆಯಾ ದಿನವನ್ನು ಆರಂಭಿಸುವ ಮೊದಲು, ಹಾಗೂ ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ, ವಾರ ಭವಿಷ್ಯ, ಮಾಸ ಭವಿಷ್ಯ ಹೇಗಿದೆ ಎಂದು ನೋಡಿಕೊಳ್ಳುತ್ತಾರೆ. ಮುಂದಿನ ವಾರ ಏನಾಗಬಹುದು ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. 2025ರ ಮಾರ್ಚ್‌ 2ರಿಂದ 8ರವರೆಗೆ (ಭಾನುವಾರದಿಂದ ಶನಿವಾರ) ಒಂದು ವಾರದ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ವಾರಭವಿಷ್ಯ: 02.03.2025ರಿಂದ 08.03.2025ರವರೆಗೆ (ಭಾನುವಾರದಿಂದ ಶನಿವಾರ)

ಮೇಷ ರಾಶಿಯವರು ಹೊಸ ಆಲೋಚನೆಗಳೊಂದಿಗೆ ಮುಂದುವರೆಯುತ್ತಾರೆ. ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗಿ ತಮ್ಮ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಾರೆ. ಆಸ್ತಿಗೆ ಸಂಬಂಧಿಸಿದ ಕಿರಿಕಿರಿ ನಿವಾರಣೆಯಾಗುತ್ತವೆ. ಗುತ್ತಿಗೆದಾರರಿಗೆ ಇದು ಅಪಾಯಕಾರಿ ಸಮಯ. ತಮ್ಮ ಶತ್ರುಗಳನ್ನು ಎದುರಿಸಬೇಕಾದ ಸಮಯವಿದು. ಸಾಲಗಳನ್ನು ತೀರಿಸಲು ಒಂದು ಮಾರ್ಗ ಸೃಷ್ಟಿಯಾಗುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡು...