Bengaluru, ಮಾರ್ಚ್ 26 -- ಜೀವನದ ಅನಿರೀಕ್ಷಿತ ಬದಲಾವಣೆಗಳಲ್ಲಿ ಮದುವೆಯೂ ಒಂದು. ಸುಂದರ ಅನುಭವ, ನೂರಾರು ಕನಸುಗಳೊಂದಿಗೆ ಅಪರಿಚಿತ ವ್ಯಕ್ತಿಗಳು ಒಂದೇ ಸೂರಿನಡಿ ಬದುಕು ಕಟ್ಟಿಕೊಳ್ಳಲು ಶುರುವಾಗುವ ಈ ಯಾತ್ರೆಯಲ್ಲಿ ಸಂತಸದ ಸಮಯದಷ್ಟೇ ನೂರಾರು ನೋವು, ಆತಂಕಗಳು ಮನೆಮಾಡಿರುತ್ತದೆ. ಹಲವು ಮಂದಿ ಮದುವೆ ಆಗಲು ಹಿಂಜರಿಯುತ್ತಾರೆ. ಮದುವೆ ಅಂದ್ರೆ ಭಯವಾಗುತ್ತದೆ. ಇದಕ್ಕೇನು ಕಾರಣ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮನಶಾಸ್ತ್ರಜ್ಞ ಬನಿತಾ ಸಿಂಗ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನ ಥೆರಪಿ ವಿತ್ ಶೌರ್ಯ ಪೇಜ್ ಅಲ್ಲಿ, ಮದುವೆಯಾಗಲು ಹಿಂಜರಿಯಲು ಹಾಗೂ ಭಯಭೀತರಾಗುವಂತೆ ಮಾಡುವ ಮಾನಸಿಕ ಅಂಶಗಳು ಯಾವುವು ಎಂಬುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದಲ್ಲದೆ, ಮದುವೆಯ ಬಾಂಧವ್ಯದ ಕುರಿತು ಕೆಲ ವಿಚಾರಗಳನ್ನು ಹೇಳಿದ್ದು, ಅವುಗಳು ಚಿಂತೆಗೀಡು ಮಾಡುವಂತಹ ಅಥವಾ ಭಯಭೀತರಾಗುವ ಅಂಶಗಳಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮನ್ನು ತಾವೇ ಕಳೆದುಕೊಳ್ಳುವ ಭಯ: ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಸಮಯವನ್ನು, ಸ್ವಾತಂತ್ರ್ಯವನ್ನು ಪ್...