Bengaluru, ಏಪ್ರಿಲ್ 30 -- ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ ನಟ ಮಧು ಹೆಗ್ಡೆ. ಹತ್ತಾರು ಧಾರಾವಾಹಿಗಳಲ್ಲಿ ನಟಿಸಿರುವ ಮಧು, ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಿಪುಣ ಸಂತೋಷನಾಗಿ ಅವರ ಪಾತ್ರ ಸಾಗುತ್ತಿದೆ.

ಇತ್ತ ಇದೇ ಮಧು ಹೆಗಡೆ ತಮ್ಮ ರಿಯಲ್‌ ಪತ್ನಿ ಜತೆಗಿನ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಏಪ್ರಿಲ್‌ 29ಕ್ಕೆ ನಮ್ರತಾ ಶರ್ಮಾ ಅವರನ್ನು ವರಿಸಿ ಆರು ವರ್ಷಗಳು ಕಳೆದಿವೆ. ಈ ಖುಷಿಯಲ್ಲಿ ಪತ್ನಿ ನಮ್ರತಾ ಜತೆಗಿನ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ, ನಮ್ರತಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆನ್‌ಲೈನ್‌ ಸೀರೆ ಬಿಜಿನೆಸ್‌ನಲ್ಲಿದ್ದಾರೆ. ಇವರು ಮೂಲತಃ ಸಕಲೇಶಪುರದವರು.

ಶಿವಮೊಗ್ಗದ ಹೊಸನಗರ ಮೂಲದ ಮಧು ಹೆಗಡೆ, ದಶಕಗಳಿಂದ ಬಣ್ಣದ ಲೋಕದ ನಂಟು ಹೊಂದಿದ್ದಾರೆ.

ಕನ್ನಡದ ಗುಪ್ತ ಗಾಮಿನಿ, ಮಳೆ ಬಿಲ್ಲು, ಜೋಗುಳ, ಮೌನ ರಾಗ, ...