ಭಾರತ, ಫೆಬ್ರವರಿ 1 -- ಬೆಂಗಳೂರು: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ 6 ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಲಕ್ಷ್ಮಿ, ಲೀಲಾವತಿ, ಗೀತಾ, ಮಂಜುಳಾ, ಹರೀಶ್, ವೆಂಕಟೇಶ್ ಬಂಧಿತ ಆರೋಪಿಗಳು.

ರಾಪಿಡೊ ಚಾಲಕ ಸುರೆಂದ್ರ ಕುಮಾರ್​ಗೆ 34 ವರ್ಷಗಳಾದರೂ ಮದುವೆಯಾಗಿರಲಿಲ್ಲ. ಸುರೆಂದ್ರ​​ಗೆ ರಾಪಿಡೊ ಬುಕ್‌ ಮಾಡಿದ ಮಂಜುಳ ಪರಿಚಯವಾಗಿತ್ತು. ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಸಂತ್ರಸ್ತ ಯುವಕ ತಾನು ಮದುವೆಯಾಗಲು ಹೆಣ್ಣು ಹುಡುಕುತ್ತಿದ್ದು ಕನ್ಯೆ ಇದ್ದರೆ ಹೇಳಿ ಎಂದು ಹೇಳಿದ್ದರು.

ನಂತರ ಜನವರಿ 20 ರಂದು ಮಂಜುಳಾ ಯುವಕನಿಗೆ ಕರೆ ಮಾಡಿ ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಹೇಳಿದ್ದಳು. ಮಂಜುಳ ಸ್ನೇಹಿತೆ ಹೆಬ್ಬಾಳದ ವಿಜಯಲಕ್ಷ್ಮಿ ಮನೆಗೆ ಸಂತ್ರಸ್ತ ಯುವಕ ಹೋಗಿರುತ್ತಾರೆ. ಮನೆಯಲ್ಲಿ ಲೀಲಾವತಿ ಎಂಬ ಯುವತಿಯನ್ನು ವಿಜಯಲಕ್ಷ್ಮಿ ಪರಿಚಯ ಮಾಡಿಸುತ್ತಾಳೆ.

ಟೀ ತರುತ್ತೇನೆ ಎಂದು...