ಭಾರತ, ಮಾರ್ಚ್ 16 -- ಚಾಮರಾಜನಗರ: ಮೈಸೂರಿನಿಂದ ಚಾಮರಾಜನಗರಕ್ಕೆಂದು ಬಂದಿದ್ದ ಯುವಕರ ಗುಂಪು ಚಾಮರಾಜನಗರ ಜಿಲ್ಲೆಯ ತಮಿಳುನಾಡು ಗಡಿ ಭಾಗವಾದ ಪುಣಜನೂರಿಗಗೆ ಚಹಾ ಕುಡಿಯಲೆಂದು ಮಧ್ಯರಾತ್ರಿ ಹೋಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಜೀವ ಕಳೆದುಕೊಂಡ ಘಟನೆ ನಡೆದಿದೆ. ಶನಿವಾರ ಮಧ್ಯರಾತ್ರಿ ವೇಳೆ ಭೀಕರ ಅಪಘಾತ ನಡೆದು ಕಾರು ನಜ್ಜುಗುಜ್ಜಾಗಿ ಹೋಗಿದೆ‌. ಘಟನೆಯಲ್ಲಿ ಇಬ್ಬರು ಮೃತಪಟ್ಟರೆ, ಮೂವರು ತೀವ್ರವಾಗಿ ಗಾಯಗೊಂಡಿದಾರೆ.ಮದುವೆಗೆ ಭಾಗವಹಿಸಲು ಬಂದಿದ್ದವರ ಕಾರು ಮರಕ್ಕೆ ಡಿಕ್ಕಿಯಾಗಿ ಬಳಿಕ ಮಗುಚಿ ಬಿದ್ದು ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ಬಳಿ ನಡೆದಿದೆ ಎಂದು ಚಾಮರಾಜನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೈಸೂರಿನ ರಮಾಬಾಯಿ ನಗರದ ಜೀವನ್ ಹಾಗೂ ನಂದನ್‌ (ಇಬ್ಬರಿಗೂ 24 ವರ್ಷ) ಸ್ಥಳ ದಲ್ಲೇ ಮೃತಪಟ್ಟವರು. ಜೀವನ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದು ನಂದನ್ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನುವುದು ಪೊಲೀಸರು ನೀಡಿರುವ ಮಾಹಿತಿ. ಮೈಸೂರಿನ ರಮಾಬಾಯಿನಗರದ ಶಶಾಂ...