ಭಾರತ, ಫೆಬ್ರವರಿ 7 -- ಪ್ರೀತಿಸುವ ವ್ಯಕ್ತಿಯೊಂದಿಗೆ ಜಗಳ, ಮುನಿಸು, ಕೋಪ, ಮನಸ್ತಾಪಗಳು ಸಹಜ ಸಂಗತಿ. ಇದ್ಯಾವುದು ಇಲ್ಲದಿದ್ದರೆ ಜೀವನವೇ ಬೇಸರವಾಗುತ್ತದೆ. ಬದುಕಿನಲ್ಲಿ ಒಟ್ಟಾಗಿ ಬಾಳಿ ಬದುಕಿದ ಅದೆಷ್ಟೋ ದಂಪತಿಗಳು 'ನೀವು ಹೀಗೆ ಅಂತ ಗೊತ್ತಿದ್ರೆ ನಿಮ್ಮನ್ನ ಮದುವೆನೇ ಆಗ್ತಾ ಇರ್ಲಿಲ್ಲ' ಎಂದು ತಮಾಷೆಗೆ ಹೇಳಿ ರೇಗಿಸಿದರೆ, ಇನ್ನೂ ಕೆಲವೊಬ್ಬರು ಈ ಚಿಕ್ಕ ಚಿಕ್ಕ ಬಿರುಕುಗಳನ್ನೇ ದೊಡ್ಡದಾಗಿಸಿಕೊಂಡು, ಪರಸ್ಪರ ಹೊಂದಾಣಿಕೆಯಾಗದೇ ಬೇಸತ್ತು ವಿಚ್ಛೇದನ ಪಡೆಯುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ.

ಆದರೆ, ತಾವು ಪ್ರೀತಿಸುತ್ತಿರುವ ಅಥವಾ ಮದುವೆಯಾಗುವ ವ್ಯಕ್ತಿಯೊಂದಿಗೆ ಯಾವುದೇ ಒಪ್ಪಂದ, ಬಂಧನಗಳಿಗೆ ಒಳಗಾಗದೆ ಸ್ವತಂತ್ರವಾಗಿ ಬಾಳಲು ಇಚ್ಛಿಸುವ ಸಾಕಷ್ಟು ಯುವ ಜನರಿಗೆ ಈ ಲಿವಿಂಗ್ ಟುಗೆದರ್ ಎನ್ನುವ ಪರಿಕಲ್ಪನೆ ತುಂಬಾ ಇಷ್ಟವಾಗುತ್ತದೆ. ತಮ್ಮ ಸಂಗಾತಿಯ ಕುರಿತು ಮತ್ತಷ್ಟು ತಿಳಿದುಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ನಿಜಕ್ಕೂ ಈ ಲಿವಿಂಗ್ ಟುಗೆದರ್ ರಿಲೆಷನ್‌ಶಿಪ್ ಮೂಲಕ ವಿಚ್...