Mysore, ಮಾರ್ಚ್ 19 -- ಬಂಡೀಪುರ: ಮೈಸೂರು ದಸರಾ ಎರಡು ಆನೆಗಳಾದ ಅರ್ಜುನ ಹಾಗೂ ಬಲರಾಮ ಅನಾಹುತದಿಂದ ಮೃತಪಟ್ಟು ಒಂದೂವರೆ ವರ್ಷ ಕಳೆಯುವ ಮುನ್ನವೇ ಮತ್ತೊಂದು ದಸರಾ ಆನೆ ಗದ್ದಲ ಎಬ್ಬಿಸಿ ಮಾವುತನ ಮೇಲೆ ತೀವ್ರವಾಗಿ ದಾಳಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಬಂಡೀಪುರದಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೋಹಿತ್ ಎಂಬ ದಸರಾ ಆನೆ ಏಕಾಏಕಿ ರೊಚ್ಚಿಗೆದ್ದು, ಮಾವುತನ ಮೇಲೆ ದಾಳಿ ಮಾಡುವ ಜೊತೆಗೆ ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ರಂಪಾಟ ನಡೆಸಿದೆ. ಪ್ರವಾಸಿಗರ ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದು ಭಯದಿಂದಲೇ ಪ್ರವಾಸಿಗರು ತಪ್ಪಿಸಿಕೊಂಡಿದ್ದಾರೆ. ಇದರಿಂದ ಭಾರೀ ಅನಾಹುತವೇ ತಪ್ಪಿದೆ. ರಂಪಾಟ ನಡೆಸಿದ ರೋಹಿತ್ ಆನೆ ಬುಧವಾರ ಮಧ್ಯಾಹ್ನದವರೆಗೂ ಕಾಡಿನೊಳಗೆ ಹೋಗಿ ತಪ್ಪಿಸಿಕೊಂಡಿದ್ದು ಅದರ ಹುಡುಕಾಟ ಮುಂದುವರಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ರಾಂಪುರ ಆನೆ ಶಿಬಿರದಿಂದ ವಿಶೇಷ ತರಬೇತಿಗಾಗಿ ಬಂಡೀಪುರಕ್ಕೆ ರೋಹಿತ್ ಎಂಬ ಸಾಕಾನೆಯನ್ನು ಕರೆತರಲಾಗಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.