ಭಾರತ, ಮೇ 7 -- ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಪ್ರಪಂಚದಾದ್ಯಂತ ಮದರ್ಸ್ ಡೇ ಅಥವಾ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 11ಕ್ಕೆ ತಾಯಂದಿರ ದಿನವಿದ್ದು, ಈ ವರ್ಷ ನೀವು ನಿಮ್ಮ ಅಮ್ಮನಿಗೆ ವಿಶೇಷ ಗಿಫ್ಟ್ ಕೊಡಬೇಕು ಅಥವಾ ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಬೇಕು ಅಂತಿದ್ರೆ ಅವರನ್ನು ವಂಡರ್‌ಲಾಗೆ ಕರೆದುಕೊಂಡು ಹೋಗಿ.

ವಂಡರ್ ಲಾ ಮದರ್ಸ್ ಡೇ ಸಲುವಾಗಿ ವಿಶೇಷ ಆಫರ್‌ವೊಂದನ್ನು ನೀಡುತ್ತಿದೆ. ಈ ವಿಶೇಷ ದಿನದ ಸಲುವಾಗಿ ಎಲ್ಲಾ ತಾಯಂದಿರಿಗೂ ಉಚಿತ ಪ್ರವೇಶಕ್ಕೆ ಅವಕಾಶ ಕೊಡ್ತಿದೆ. ದೇಶದಾದ್ಯಂತ ಇರುವ ವಂಡರ್‌ ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಮೇ 10 ಹಾಗೂ 11 ರಂದು ಪ್ರವೇಶ ಉಚಿತ ಪ್ರವೇಶಕ್ಕೆ ಅವಕಾಶವಿದೆ.

ಬೆಂಗಳೂರು, ಕೊಚ್ಚಿ, ಹೈದರಾಬಾದ್ ಹಾಗೂ ಭುವನೇಶ್ವರದಲ್ಲಿರುವ ವಂಡರ್‌ ಲಾದಲ್ಲಿ ಈ ವಿಶೇಷ ಆಫರ್ ಇದ್ದು, ತಾಯಂದಿರ ದಿನವನ್ನು ವಿಶೇಷವನ್ನಾಗಿಸಲು ಈ ಸೂಪರ್ ಅವಕಾಶವನ್ನು ನೀವೂ ಬಳಸಿಕೊಳ್ಳಬಹುದು.

ಪ್ರತಿದಿನ ಮಕ್ಕಳು, ಗಂಡ, ಮನೆ, ಕೆಲಸ ಎಂದು ತನ್ನ ಜೀವನವನ್ನು ಮುಡಿಪಾಗಿಡುವ ತಾಯಿ...