ಭಾರತ, ಮೇ 18 -- ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ಮತ್ತೊಮ್ಮೆ ಚೇಸಿಂಗ್‌ ವೇಳೆ ಎಡವಿದೆ. ಅತ್ತ ಪಂಜಾಬ್‌ ಕಿಂಗ್ಸ್‌ ತಂಡವು ಪ್ಲೇಆಫ್‌ ರೇಸ್‌ಗೆ ಮತ್ತಷ್ಟು ಹತ್ತಿರವಾಗಿದೆ. ಜೈಪುರದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ರಾಯಲ್ಸ್‌‌ ತಂಡವನ್ನು 10 ರನ್‌ಗಳಿಂದ ಮಣಿಸಿದ ಪಂಜಾಬ್‌ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಲ್ಲದೇ ಪ್ಲೇಆಫ್‌ ಹಂತಕ್ಕೇರಲು ಇನ್ನೊಂದೇ ಹೆಜ್ಜೆ ಹಿಂದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಕಿಂಗ್ಸ್‌, ವೇಗದ ಆಟಕ್ಕೆ ಮಣೆ ಹಾಕಿತು. ವಿಕೆಟ್‌ ಕಳೆದುಕೊಂಡರೂ, ನಿರಂತರವಾಗಿ ರನ್‌ ಹರಿದು ಬಂತು. ಪ್ರಿಯಾಂಶ್‌ ಆರ್ಯ 9, ಪ್ರಭ್‌ಸಿಮ್ರನ್‌ ಸಿಂಗ್‌ 21 ರನ್‌ ಗಳಿಸಿದರು. ಬದಲಿ ಆಟಗಾರನಾಗಿ ತಂಡದ ಪರ ಈ ಬಾರಿ ಮೊದಲ ಪಂದ್ಯವಾಡಿದ ಮಿಚೆಲ್‌ ಓವನ್‌ ಎದುರಿಸಿದ ಎರಡನೇ ಎಸೆತದಲ್ಲೇ ಔಟಾದರು. ಈ ವೇಳೆ ನೆಹಾಲ್‌ ವಧೇರ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಉತ್ತಮ ಜೊತೆಯಾಟವಾಡಿದರು. ಆದರೆ ನಾಯಕ ಆಟ 30 ರನ್‌ಗಳಿಗೆ ಅಂತ್ಯವಾಯ್ತು....