Bengaluru, ಏಪ್ರಿಲ್ 18 -- ಗುಂಡ (ನಾಯಿ) ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆ ಇಟ್ಟುಕೊಂಡು ನಿರ್ಮಿಸಿದ್ದ ನಾನು ಮತ್ತು ಗುಂಡ ಚಿತ್ರ ಎರಡೂವರೆ ವರ್ಷಗಳ ಹಿಂದೆ ತೆರೆಕಂಡು ಜನಮನ ಸೂರೆಗೊಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘು ಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾದ ʻನಾನು ಮತ್ತು ಗುಂಡ -2 ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರನ್ನು ಕೆಜಿಎಫ್ ಖ್ಯಾತಿಯ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ಕಿರಗಂದೂರು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ, ನಿರ್ದೇಶಕ ರಘು ಹಾಸನ್, ರಾಕೇಶ್ ಈ ಚಿತ್ರದಲ್ಲಿ ಶಿವರಾಜ್ ಅವರ ಮಗನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್‌ಗೆ ಹೋಗಲಿದೆ. ಮೊದಲ ಭಾಗ ಮಾಡುವಾಗಲೇ 2ರ ಕಥೆ ರೆಡಿ ಮಾಡಿಕೊಂಡಿದ್ದೆ. ಸೋಷಿಯಲ್ ಕನ್ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಊಟಿ...