ಭಾರತ, ಮೇ 13 -- ಉಪೇಂದ್ರಗೆ ತೆಲುಗು ಹೊಸದಲ್ಲ. 27 ವರ್ಷಗಳ ಹಿಂದೆಯೇ ಅವರು 'ಕನ್ಯಾದಾನಂ' ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ನಂತರ 'ರಾ', 'ಟಾಸ್‍', 'ಸನ್‍ ಆಫ್‍ ಸತ್ಯಮೂರ್ತಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. 2022ರಲ್ಲಿ ಬಿಡುಗಡೆಯಾದ 'ಘನಿ' ಎಂಬ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಅವರು ತೆಲುಗು ಚಿತ್ರದಲ್ಲಿ ನಟಿಸಿರಲಿಲ್ಲ.

ಈಗ ಮೂರು ವರ್ಷಗಳ ನಂತರ ಉಪೇಂದ್ರ, ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್‍ ಪೋತಿನೇನಿ ಅಭಿನಯದ 22ನೇ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದ ಮೊದಲ ಝಲಕ್‍, ಮೇ 15ರಂದು ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಈ ಚಿತ್ರವನ್ನು 'ರಾಪೋ 22' ಎಂದು ಕರೆಯಲಾಗುತ್ತಿದ್ದು, ಚಿತ್ರದ ಹೆಸರು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಈ ವಿಷಯವನ್ನು ಟ್ವೀಟ್‍ ಮಾಡಿರುವ ಅವರು, 'ರಾಮ್‍ ಪೋತಿನೇನಿ ಅಭಿನಯದ 22ನೇ ಚಿತ್ರದಲ್ಲಿ ಸೂರ್ಯ ಕುಮಾರ್‍ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಕಾತುರ...