Bengaluru, ಮಾರ್ಚ್ 18 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಮಾರ್ಚ್ 17ರ ಸಂಚಿಕೆಯಲ್ಲಿ ಹರೀಶನ ಜೊತೆ ವೀಣಾ ಮಾತನಾಡುತ್ತಾ ಕುಳಿತಿದ್ದಾರೆ. ಅಜ್ಜಿಯ ಬಗೆಗೂ ಮಾತನಾಡುತ್ತಾ ವೀಣಾ, ನೀನು ಅಂದ್ರೆ ಅಜ್ಜಿಗೆ ಅಷ್ಟೊಂದು ಇಷ್ಟ ಆಗಿದ್ರೆ, ಅವರು ಬೇಗ ಹುಷಾರಾಗಲಿ ಎಂದು ನೀನು ಯಾಕೆ ಮುಡಿ ಕೊಡಬಾರದು ಎಂದು ಕೇಳುತ್ತಾಳೆ. ಆಗ ಹರೀಶ, ಅದು ಹೇಗೆ ಸಾಧ್ಯ, ಅಜ್ಜಿ ಬಗ್ಗೆ ಪ್ರೀತಿಯಿದೆ, ಅದರ ಬದಲು ಬೇರೆ ಏನಾದರೂ ಹೇಳಿ ಅತ್ತಿಗೆ ಎನ್ನುತ್ತಾಳೆ. ಆಗ ಹರೀಶನ ಬಳಿ, ವೀಣಾ ನೀನು ಹೋಗಿ ಅಜ್ಜಿಯನ್ನು ಸ್ವಲ್ಪ ನೋಡಿಕೋ, ಅಷ್ಟು ಸಾಕು ಎನ್ನುತ್ತಾಳೆ. ಅದರಂತೆ ಹರೀಶ್ ಅಜ್ಜಿಯನ್ನು ನೋಡಿಕೊಳ್ಳಲು ಹೋಗುತ್ತಾನೆ.

ಭಾವನಾ ಮತ್ತು ಸಿದ್ದೇಗೌಡ್ರು ಮನೆಯಲ್ಲಿ ಮಾತನಾಡುತ್ತಾ, ಕೇಸ್ ಬಗೆಗೂ ಮಾತನಾಡುತ್ತಾರೆ, ನೀವು ಯಾಕೆ ಚಿಂತೆಯಲ್ಲಿದ್ದೀರಿ ಎಂದು ಭಾವನಾ ಕೇಳುತ್ತಾಳೆ. ಆಗ ಸಿದ್ದೇಗೌಡ್ರು, ಹಾಗೇನಿಲ್ಲ, ನಾನು ಕೇಸ್ ಬಗ್ಗೆ ಚಿಂತೆ ಮಾಡುತ್ತಿದ್ದೆ, ಅವನು ಯಾವಾಗ ಸಿಕ್ಕಿಬೀಳುತ್ತಾನೆ ಎಂದು ಕೇಳುತ್ತಾನೆ. ನಂತರ ಪ...