Bengaluru, ಜನವರಿ 28 -- Lakshmi Nivasa Serial: ರಾಜಕೀಯದ ಕೆಲಸಕ್ಕೆ ಬೇರೆ ಊರಿಗೆ ಹೋಗಿ ಬಂದ ಜವರೇಗೌಡನಿಗೆ ಮನೆಯಲ್ಲಿ ಮಗ ಸೊಸೆ ಇಲ್ಲದ ವಿಚಾರ ತಿಳಿಯುತ್ತದೆ. ಸಿದ್ದುವನ್ನು ಹುಡುಕುತ್ತಾ ಅವನ ಸ್ನೇಹಿತರ ಬಳಿ ಹೋಗುತ್ತಾನೆ. ಸಿದ್ದು ಮನೆಬಿಟ್ಟು ಬಂದು ಕೂಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಜವರೇಗೌಡ ಬೇಸರಗೊಳ್ಳುತ್ತಾನೆ. ನಾನು ಎಲೆಕ್ಷನ್‌ನಲ್ಲಿ ಗೆದ್ದದ್ದು, ಮಿನಿಸ್ಟರ್‌ ಆಗಿದ್ದು ಸೊಸೆ ಕಾಲ್ಗುಣದಿಂದಲೇ ಎಂದು ಜವರೇಗೌಡ ನಂಬಿದ್ದಾನೆ. ಇದೇ ಕಾರಣಕ್ಕೆ ಮನೆಯವರ ಬಳಿ ಮಾತನಾಡಿ ಮತ್ತೆ ಮಗ ಸೊಸೆಯನ್ನು ವಾಪಸ್‌ ಕರೆದುಹೋಗಲು ನಿರ್ಧರಿಸುತ್ತಾನೆ.

ಅಪ್ಪ ಇದ್ದಕ್ಕಿದ್ದಂತೆ ತನ್ನ ಬಳಿ ಬಂದಿದ್ದನ್ನು ನೋಡಿ ಸಿದ್ದು ಶಾಕ್‌ ಆಗುತ್ತಾನೆ, ನಾನು ಕಷ್ಟಪಟ್ಟು ದುಡಿಯುತ್ತಿರುವುದು ನನ್ನ‌ ಮಕ್ಕಳು ಚೆನ್ನಾಗಿರಲಿ ಎಂಬ ಕಾರಣಕ್ಕೆ ನೀನು ನೋಡಿದರೆ ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದೀಯ ಮನೆಗೆ ವಾಪಸ್‌ ಬಾ ಎಂದು ಕರೆಯುತ್ತಾನೆ. ನಾನು ಬಂದರೂ ಮೇಡಂ ಬರುವುದಿಲ್ಲ ಎಂದು ಸಿದ್ದಗೌಡ ಹೇಳುತ್ತಾನೆ. ಜವರೇಗೌಡ ವಿಧಿ ಇಲ್ಲದೆ ಮನೆ...