Bengaluru, ಮಾರ್ಚ್ 23 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ ಮತ್ತು ಭಾವನಾ ದಂಪತಿ, ಖುಷಿಯಿಂದ ಫಾರಿನ್ ಟೂರ್‌ಗೆ ಹೋಗಿದ್ದಾರೆ. ಅವರಿಬ್ಬರನ್ನೂ ಉಪಾಯದಿಂದ ಜವರೇಗೌಡ ಮತ್ತು ಮರಿಗೌಡ್ರು ಕಳುಹಿಸಿಕೊಟ್ಟಿದ್ದಾರೆ. ಇಬ್ಬರೂ ಅತ್ತ ಹೋಗಿರುವ ಈ ಸಂದರ್ಭವನ್ನು ಬಳಸಿಕೊಂಡು, ಜವರೇಗೌಡ ಮತ್ತು ಮರಿಗೌಡ್ರು, ಸಿದ್ದೇಗೌಡನ ಮೇಲಿನ ಕೇಸ್ ಅನ್ನು ಕ್ಲೋಸ್ ಮಾಡಿಸುವ ಪ್ಲ್ಯಾನ್ ರೂಪಿಸಿದ್ದಾರೆ. ಅದರಂತೆ ಎಲ್ಲ ಸಿದ್ಧತೆ ನಡಿದಿದೆ. ಆದರೆ ಭಾವನಾ ಮತ್ತು ಸಿದ್ದೇಗೌಡ, ಫಾರಿನ್ ಟೂರ್ ಹೋಗಿರುವುದು ಮಾತ್ರ ಮನೆಯವರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಮತ್ತೊಂದೆಡೆ, ಹರೀಶ್ ಮತ್ತು ಸಂತೋಷ್, ಮನೆಯಲ್ಲಿ ಖರ್ಚು ವೆಚ್ಚ ಹೆಚ್ಚಾಗುತ್ತಿದೆ ಎಂದು ಚಿಂತೆ ಮಾಡುತ್ತಿದ್ದಾರೆ. ಅದಕ್ಕಾಗಿ ಅಜ್ಜಿಯ ಟ್ರಂಕ್ ಎಗರಿಸಿದರೂ, ಅದರಿಂದ ಏನೂ ಪ್ರಯೋಜನವಾಗಿಲ್ಲ, ಹೀಗಾಗಿ ಅವರು ಪ್ಲ್ಯಾನ್ ಅನ್ನು ಅಲ್ಲಿಯೇ ಕೈಬಿಟ್ಟಿದ್ದಾರೆ. ಅದರ ಬದಲು, ಅಪ್ಪ ಮತ್ತು ಅಜ್ಜಿಯ ಬಳಿ ಇರುವ ಹಣವನ್ನ ಎಗರಿಸುವುದು ಹೇಗೆ ಎಂದು ಯೋಚನೆ ಮಾಡುತ್...