Bengaluru, ಮಾರ್ಚ್ 15 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಮಾರ್ಚ್ 14ರ ಸಂಚಿಕೆಯಲ್ಲಿ ಮನೆಯಲ್ಲಿ ಶರ್ಟ್‌ನಲ್ಲಿ ಕೊಳೆ ಮತ್ತು ಜೇಬಿನಲ್ಲಿ ಸ್ವಲ್ಪ ಹಣ ಇರುವುದನ್ನು ಕಂಡ ಭಾಗ್ಯ, ಗುಂಡಣ್ಣನನ್ನು ವಿಚಾರಿಸಿದ್ದಾಳೆ. ಆಗ ಗುಂಡಣ್ಣ, ಅದು ನನ್ನ ಗೆಳೆಯನ ದುಡ್ಡು, ಅವನಿಗೆ ವಾಪಸ್ ಕೊಡಬೇಕಿತ್ತು, ಆದರೆ ಮರೆತುಬಿಟ್ಟೆ, ಹೀಗಾಗಿ ಅದನ್ನು ಜೇಬಿನಲ್ಲಿಯೇ ಇಟ್ಟುಕೊಂಡಿದ್ದೇನೆ, ಆಮೇಲೆ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾನೆ. ಆದರೂ ಭಾಗ್ಯ, ಹಾಗೆಲ್ಲ ಬೇರೆಯವರ ದುಡ್ಡು ಇಟ್ಟುಕೊಳ್ಳಬಾರದು, ಇವತ್ತೇ ವಾಪಸ್ ಕೊಡಬೇಕು ಎಂದು ಎಚ್ಚರಿಸಿದ್ದಾಳೆ. ಬಳಿಕ ಶರ್ಟ್‌ನಲ್ಲಿ ಕೊಳೆ ಮಾಡಿಕೊಳ್ಳಬಾರದು, ಶಾಲೆಯ ಯೂನಿಫಾರ್ಮ್ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಬುದ್ಧಿ ಹೇಳಿದ್ದಾಳೆ. ಗುಂಡಣ್ಣ ತಲೆಯಾಡಿಸಿದ್ದಾನೆ.

ಬಳಿಕ ಮರುದಿನ ಬೆಳಗ್ಗೆ ಗುಂಡಣ್ಣನನ್ನು ಕರೆದುಕೊಂಡು ಭಾಗ್ಯ ಕೆಲಸಕ್ಕೆ ಹೊರಟಿದ್ದಾಳೆ, ಆಗ ಹೊರಗಡೆ ಅವಳಿಗೆ ಯಾವುದೇ ಅಟೋ ಸಿಕ್ಕಿಲ್ಲ. ಅದಕ್ಕಾಗಿ ಕಾಯುತ್ತಾ ನಿಂತಿದ್ದಾಳೆ. ಅಷ್ಟರಲ್ಲಿ ಅತ್ತೆ...