Bangalore, ಏಪ್ರಿಲ್ 25 -- ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಕಿಯಾರ ಅಡ್ವಾಣಿ ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ತಮ್ಮ ರೈಡಿಂಗ್‌ ಅಪ್‌ಗ್ರೇಡ್‌ ಮಾಡಿದ್ದಷ್ಟೇ ಅಲ್ಲ, ಕಳೆದ ತಿಂಗಳು ಮುಂಬೈನಲ್ಲಿ ಮನೆ ಹುಡುಕಾಟದ ಸಂದರ್ಭದಲ್ಲಿಯೂ ಸುದ್ದಿಯಾಗಿದ್ದರು. ಮನೆಗೆ ಹೊಸ ಅತಿಥಿ ಆಗಮಿಸುವ ನಿರೀಕ್ಷೆಯಲ್ಲಿರುವ ಇವರು ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿ ಇವರು 1.12 ಕೋಟಿ ರೂಪಾಯಿ ಬೆಲೆಬಾಳುವ ವಸ್ತು ಖರೀದಿಸಿದ್ದಾರೆ. ನಿಮಗೀಗ ಅರ್ಥವಾಗಿರಬಹುದು, ಅದು ಕಾರು ಎಂದು. ಹೌದು, ಅವರ ಮನೆಗೆ ದುಬಾರಿ ವಿಲಾಸಿ ಕಾರಿನ ಆಗಮನವಾಗಿದೆ.

ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ 1.12 ಕೋಟಿ ರೂಪಾಯಿ ದರದ ಟೊಯೊಟಾ ಕಾರು ಖರೀದಿಸಿದ್ದಾರೆ. ಮುಂಬೈ ಮೂಲದ ಫೋಟೋಗ್ರಾಫರ್‌ವೊಬ್ಬರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಕಾರು ಖರೀದಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಕಿಯಾರಗೆ ಪ್ರೀತಿಯಿಂದ ಸಿದ್ಧಾರ್ಥ್ ಮಲ್ಹೋತ್ರಾ ಈ ಕಾರನ್ನ ಉಡುಗೊರೆಯಾಗಿ ನೀಡ...