ಭಾರತ, ಮಾರ್ಚ್ 19 -- ಉತ್ತರಪ್ರದೇಶ: ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಹೆಣವನ್ನು ಫ್ರಿಜ್‌ನಲ್ಲಿಟ್ಟ ಘಟನೆ ದೇಶವ್ಯಾಪಿ ಸದ್ದು ಮಾಡಿತ್ತು. ಆ ಘಟನೆ ನಂತರ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಲ್ಲಿ ಪತ್ನಿಯೇ ಪತಿಯನ್ನು ಕೊಂದು ಹೆಣವನ್ನು ಮುಚ್ಚಿಟ್ಟಿದ್ದಾಳೆ. ಈ ಘಟನೆಯ ವಿವರ ಇಲ್ಲಿದೆ ಓದಿ.

ಉತ್ತರ ಪ್ರದೇಶ ಮೂಲದ ನೌಕಾಪಡೆಯ ಅಧಿಕಾರಿಯೊಬ್ಬರನ್ನು ಅವರ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದು ಮಾತ್ರವಲ್ಲ, ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್‌ನೊಳಗೆ ತುಂಬಿ ಸಿಮೆಂಟ್‌ನಿಂದ ಮುಚ್ಚಿಟ್ಟಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಮಾರ್ಚ್ 4 ರಂದು ಬ್ರಹ್ಮಪುರಿಯ ಇಂದ್ರಾ ನಗರದ 29 ವರ್ಷದ ಸೌರಭ್ ರಜಪೂತ್ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬ ದೂರ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಆಯುಷ್ ವ...