Bengaluru, ಫೆಬ್ರವರಿ 17 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 16ರ ಸಂಚಿಕೆಯಲ್ಲಿ ರೆಸಾರ್ಟ್‌ನಲ್ಲಿ ತನ್ವಿ ಹುಟ್ಟುಹಬ್ಬದ ಸಂಭ್ರಮ ಮುಂದುವರಿದಿದೆ. ಬಂದಿರುವ ಎಲ್ಲ ಅತಿಥಿಗಳು ಕೂಡ ತನ್ವಿ ಹುಟ್ಟುಹಬ್ಬದ ಆಚರಣೆ ಮತ್ತು ಭರ್ಜರಿ ಸಿದ್ಧತೆಯನ್ನು ಕಂಡು ಕೊಂಡಾಡುತ್ತಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾಗೆ ಎಲ್ಲರ ಕಡೆಯಿಂದಲೂ ಶಹಬ್ಬಾಸ್ ದೊರೆಯುತ್ತಿದೆ. ಭಾಗ್ಯ ಮಾತ್ರ ಅವಳ ಸಹೋದ್ಯೋಗಿಗಳ ಜತೆ ಡ್ಯಾನ್ಸ್ ಮಾಡುತ್ತಾ ರೆಸಾರ್ಟ್‌ಗೆ ಬರುವ ಅತಿಥಿಗಳನ್ನು ರಂಜಿಸುತ್ತಿದ್ದಾಳೆ. ಅಂದು ಅಲ್ಲಿ ಆಯೋಜನೆಯಾಗಿರುವುದು ತನ್ನದೇ ಮಗಳ ಬರ್ತ್‌ಡೇ ಎನ್ನುವುದು ಅವಳ ಗಮನದಲ್ಲಿಲ್ಲ. ಅದರ ಸುಳಿವು ಕೂಡ ಆಕೆಗೆ ಸಿಕ್ಕಿಲ್ಲ, ಈ ದಿನ ಪೂರ್ತಿ ವೇಷ ಧರಿಸಿ ಕುಣಿದು, ದುಡ್ಡು ತೆಗೆದುಕೊಂಡು ಹೋಗಬೇಕು, ಮಗಳ ಹುಟ್ಟುಹಬ್ಬವನ್ನು ಆಚರಿಸಬೇಕು ಎನ್ನುವುದು ಒಂದೇ ಅವಳ ಮನಸ್ಸಿನಲ್ಲಿದೆ.

ತನ್ವಿ ಹುಟ್ಟುಹಬ್ಬದ ಆಚರಣೆಗೆ ಬಾರ್ಬಿ ಕೇಕ್ ತಯಾರಿಸಲಾಗಿದೆ. ಅದನ್ನು ವೇದಿಕೆಗೆ ತೆಗೆದುಕೊಂಡು ಹೋಗುವಂತೆ ಭಾಗ್ಯ ಮ್ಯ...