Bangalore, ಮಾರ್ಚ್ 27 -- Milana Nagaraj Darling Krishna Baby: ಕನ್ನಡ ಸಿನಿರಂಗದ ಮುದ್ದಾದ ಜೋಡಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ತಮ್ಮ ಮಗಳ ಜತೆ ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗಳ ಜತೆ ಅಪ್ಪ ಮತ್ತು ಅಮ್ಮ ಸಂಭ್ರಮಿಸುತ್ತಿರುವ ಈ ಫೋಟೋಗಳು ನಿಮ್ಮ ಹೃದಯವನ್ನೂ ಮುದಗೊಳಗಿಸಬಹುದು. ಡಾರ್ಲಿಂಗ್‌ ಕೃಷ್ಣ ಇಂದು ಹಂಚಿಕೊಂಡ ಫೋಟೋ, ಮಿಲನಾ ನಾಗರಾಜ್‌ ನಿನ್ನೆ ಹಂಚಿಕೊಂಡ ಫೋಟೋ, ಇವರಿಬ್ಬರು ಈ ಹಿಂದೆ ಹಂಚಿಕೊಂಡ ಮಗುವಿನ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ ದಂಪತಿಗೆ ಮಗಳು ಜನಿಸಿದ್ದಳು. ಆ ಮಗುವಿಗೆ ಪರಿ ಎಂದು ಚಂದದ ಹೆಸರಿಟ್ಟಿದ್ದರು. ಈಗ ಪರಿಗೆ ಏಳು ತಿಂಗಳಾಗುತ್ತ ಬಂತು. ಮಗುವಿನ ಹಲವು ಫೋಟೋಗಳನ್ನು ಈ ಹಿಂದೆಯೂ ಇವರಿಬ್ಬರು ಹಂಚಿಕೊಂಡಿದ್ದರು. ಈಗ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಮಗಳ ಜತೆ ಫೋಟೋ ಶೂಟ್‌ ಮಾಡಿಕೊಂಡಿದ್ದಾರೆ.

ಪ್ರೇಮಿಗಳಾಗಿದ್ದ ಮಿಲನಾ ನಾಗರಾಜ್‌ ಮತ್ತು ಡ...