Bengaluru, ಏಪ್ರಿಲ್ 5 -- ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 2022ರಲ್ಲಿ ಉದ್ಯಮಿ ಯಶಸ್ವಿ ಪಾಟ್ಲ ಅವರನ್ನು ವರಿಸಿದ್ದರು.

ಮದುವೆಯ ಬಳಿಕವೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಅದಿತಿ, 2024ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡರು.

ಕಳೆದ ವರ್ಷದ ಯುಗಾದಿ ಹಬ್ಬದ ದಿನವೇ ಅಂದರೆ ಏಪ್ರಿಲ್‌ 4ರಂದು ಅದಿತಿ ಮಡಿಲು ತುಂಬಿದ್ದಳು ನೇಸರ.

ಇದೀಗ ಇದೇ ನೇಸರಾಗೆ ಮೊದಲ ವರ್ಷದ ಬರ್ತ್‌ಡೇ. ಮಗಳ ಮೊದಲನೇ ವರ್ಷದ ಬರ್ತ್‌ಡೇಯನ್ನು ಅಷ್ಟೇ ಗ್ರ್ಯಾಂಡ್‌ ಆಗಿಯೇ ಸೆಲೆಬ್ರೇಟ್‌ ಮಾಡಿದ್ದಾರೆ ಅದಿತಿ.

ಬೆಂಗಳೂರಿನ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್​ನಲ್ಲಿ ಸಿನಿಮಾ ಆಪ್ತರ ಸಮ್ಮುಖದಲ್ಲಿ​ ಗ್ರ್ಯಾಂಡ್​ ಆಗಿಯೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.

ಅದಿತಿ ಮಗಳ ಬರ್ತ್‌ಡೇ ಪಾರ್ಟಿಗೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ನಟಿಯರಾದ ಮಿಲನಾ ನಾಗರಾಜ್‌, ಅಮೃತಾ ಅಯ್ಯಂಗಾರ್‌ ಹಾಜರಿ ಹಾಕಿದ್ದರು.

ವಿದ್ಯಾಪತಿ ಸಿನಿಮಾ ನಟಿ ಮಲೈಕಾ, ಮೇಘನಾ ರಾಜ್‌ ಸರ್ಜಾ ಸಹ ಕಾರ್ಯಕ್ರಮದಲ್ಲಿ...