Bengaluru, ಫೆಬ್ರವರಿ 18 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 17ರ ಸಂಚಿಕೆಯಲ್ಲಿ ರೆಸಾರ್ಟ್‌ನಲ್ಲಿ ತನ್ವಿ ಹುಟ್ಟುಹಬ್ಬ ಆಚರಣೆ ಭರ್ಜರಿಯಾಗಿ ನಡೆದಿದೆ. ತನ್ವಿಯ ಗೆಳತಿಯರೆಲ್ಲರೂ ಆಕೆಯನ್ನು ಹೊಗಳಿ, ಇಂತಹ ಅದ್ಧೂರಿ ಬರ್ತ್‌ಡೇ ಬೇರೆಲ್ಲೂ ನೋಡಿಲ್ಲ ಎಂದು ಹೇಳಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾಗೂ ಅದು ಖುಷಿ ಕೊಟ್ಟಿದೆ. ಮತ್ತೊಂದೆಡೆ ಭಾಗ್ಯ ವೇಷ ಕಳಚಲು ಮುಂದಾಗಿದ್ದಾಳೆ. ಆಗ ಅವಳ ಸಹೋದ್ಯೋಗಿ, ಅಕ್ಕಾ, ಇಂತಹ ಹುಟ್ಟುಹಬ್ಬ ಆಚರಣೆ ದುಡ್ಡು ಇರುವವರಿಗಷ್ಟೇ, ನಮಗಲ್ಲ. ಅಲ್ಲದೆ, ನಾವು ಇದನ್ನು ನೋಡಿ ಖುಷಿಪಡಬೇಕಷ್ಟೇ ಎಂದು ಹೇಳುತ್ತಾಳೆ. ಭಾಗ್ಯಗೆ ಅವಳ ಮಾತು ಕೇಳಿ ಸಂಕಟವಾಗುತ್ತದೆ. ಅವಳು ಅಲ್ಲಿಂದ ಹೊರಟು ಹೋಗುತ್ತಾಳೆ, ವಾಷ್‌ರೂಮ್‌ನಲ್ಲಿ ಜೋರಾಗಿ ಅಳುತ್ತಾಳೆ.

ಹುಟ್ಟುಹಬ್ಬ ಭರ್ಜರಿ ಆಚರಿಸಿರುವುದಕ್ಕೆ ತಾಂಡವ್‌ಗೆ ತನ್ವಿ ಥ್ಯಾಂಕ್ಸ್ ಪಪ್ಪಾ ಎಂದು ಹೇಳಿದ್ದಾಳೆ. ಅದಕ್ಕೆ ತಾಂಡವ್, ಅಪ್ಪನಾಗಿ ಇದು ನನ್ನ ಕರ್ತವ್ಯ, ಮಗಳಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ ಎಂದು ಹೇಳುತ್ತಾನೆ. ...