Bengaluru, ಫೆಬ್ರವರಿ 15 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ಕಾಲೇಜಿನಲ್ಲಿ ತನ್ವಿ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗಿದೆ. ತನ್ವಿಯ ಕ್ಲಾಸ್‌ಮೇಟ್ಸ್ ಎಲ್ಲರೂ ಖುಷಿಯಾಗಿದ್ದಾರೆ. ಜತೆಗೆ, ಎಲ್ಲರೂ ಅವಳನ್ನು ಹೊಗಳುತ್ತಿದ್ದಾರೆ. ಈವರೆಗೆ ಯಾರೂ ಕೂಡ ಇಷ್ಟೊಂದು ಅದ್ಧೂರಿಯಾಗಿ ಕಾಲೇಜಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಲ್ಲ, ಅಲ್ಲದೆ, ಇದು ಬೆಸ್ಟ್ ಬರ್ತ್‌ಡೇ ಸೆಲೆಬ್ರೇಷನ್ ಎಂದು ಹೇಳಿದ್ದಾರೆ. ಅದನ್ನು ಕೇಳಿ ತನ್ವಿಗೆ ಖುಷಿಯಾಗಿದೆ. ತನ್ವಿಗೆ ತಮಾಷೆ ಮಾಡಿದವರು ಕೂಡ ಅವಳ ಭರ್ಜರಿ ಬರ್ತ್‌ಡೇ ಸಂಭ್ರಮ, ಆಚರಣೆ ಕಂಡು ಬೆರಗಾಗಿದ್ದಾರೆ. ಅದೇ ಸಂದರ್ಭದಲ್ಲಿ ತಾಂಡವ್‌ ತನ್ವಿಗೆ ಮತ್ತೊಂದು ಉಡುಗೊರೆ ಕೊಡುತ್ತಾನೆ. ಅದರಲ್ಲಿ ತನ್ವಿಯ ಇಷ್ಟದ ಡ್ರೆಸ್ ಇರುತ್ತದೆ. ಅದನ್ನು ಕಂಡು ತನ್ವಿ ಸಂಭ್ರಮಿಸುತ್ತಾಳೆ. ಶ್ರೇಷ್ಠಾ ತಾಂಡವ್‌ನ ಗುಣಗಾನ ಮಾಡುತ್ತಾಳೆ.

ಭಾಗ್ಯ ಯಾಕೆ ಇನ್ನೂ ಮನೆಗೆ ಬಂದಿಲ್ಲ ಎಂದು ಮನೆಯವರೆಲ್ಲಾ ಚಿಂತೆ ಮಾಡಿಕೊಂಡಿದ್ದಾರೆ, ಅದೇ ಸಮಯದಲ್ಲಿ ...