ಭಾರತ, ಏಪ್ರಿಲ್ 27 -- ಟೀಮ್ ಇಂಡಿಯಾ ವೇಗದ ಬೌಲಿಂಗ್ ಆಲ್​ರೌಂಡರ್ ದೀಪಕ್ ಚಹರ್ ಪ್ರಸ್ತುತ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡುತ್ತಿದ್ದಾರೆ. 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ದೀಪಕ್ ಚಹರ್​, ಕೊನೆಯದಾಗಿ ಆಡಿದ್ದು 2023ರಲ್ಲಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬಲಗೈ ಬೌಲರ್​​ ಜೀವನದ ಕಥೆ ಅದೆಷ್ಟೋ ಯುವಕರಿಗೆ ಸ್ಫೂರ್ತಿಯಾಗಲಿದೆ. ಇದು ಕೇವಲ ಕ್ರಿಕೆಟ್​ ಮೇಲಿರುವ ಪ್ರೀತಿ ಮಾತ್ರವಲ್ಲ, ತಂದೆ-ಮಗನ ಪ್ರೀತಿಗೂ ಸಾಕ್ಷಿಯಾಗಿದೆ.

ದೀಪಕ್ ಚಹರ್ ಜನಿಸಿದ್ದು 1992ರ ಆಗಸ್ಟ್​ 7ರಂದು. ಆಗ್ರಾದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಬಲಗೈ ಬೌಲರ್​​ ತಂದೆ ಭಾರತೀಯ ವಾಯುಪಡೆಯಲ್ಲಿ ಸೈನಿಕರಾಗಿದ್ದರು. ಆರಂಭದಲ್ಲಿ ಪುತ್ರನ ಓದಿನ ಕಡೆಗೆ ಹೆಚ್ಚು ಗಮನ ಹರಿಸಿದ್ದರೆ, ದೀಪಕ್​ ಮಾತ್ರ ಕ್ರಿಕೆಟ್​​ ಕಡೆಗೆ ಹೆಚ್ಚು ಒಲವು ತೋರಿದ್ದರು. ಆದರೆ ತಂದೆ ಮೇಲಿದ್ದ ಭಯದಿಂದ ತನಗೆ ಕ್ರಿಕೆಟ್ ಮೇಲಿರುವ ಪ್ರೀತಿಯನ್ನು ಎಂದಿಗೂ ವ್ಯಕ್ತಪಡಿಸಿರಲಿಲ್ಲ. ಚಹರ್​​ಗೆ ಓದು ಅಷ್ಟಾಗಿ ತಲೆಗೆ ಹತ್ತುತ್ತಿ...