ಭಾರತ, ಫೆಬ್ರವರಿ 16 -- ಮನೆ ಸುಂದರವಾಗಿರಬೇಕೆಂದರೆ, ಮನೆ ಕಟ್ಟುವಾಗಿಂದಲೇ ಯೋಜಿಸಿ ಕಟ್ಟಬೇಕು. ಅದೇ ರೀತಿ ಪರೀಕ್ಷೆಗೆ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಬೇಕೆಂದರೆ, ಸಿದ್ಧತೆ ಸರಿಯಾಗಿ ಆಗಬೇಕು. ಆ ಸಿದ್ದತೆ ನಡೆಸುವ ಸ್ಥಳ ಅಚ್ಚುಕಟ್ಟಾಗಿ ಇಲ್ಲದಿದ್ದರೆ, ಓದಿಗೆ ಭಂಗವಾಗುತ್ತದೆ. ಹಾಗಿದ್ದರೆ ಮನೆಯಲ್ಲಿ ಓದುವ ಕೋಣೆ ಅಥವಾ ಸ್ಟಡಿ ರೂಮ್‌ ಹೇಗಿರಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಇದಕ್ಕೆ ಒಂದೊಳ್ಳೆ ಐಡಿಯಾ ನಾವು ಹೇಳಿಕೊಡುತ್ತೇವೆ. ಮಕ್ಕಳ ಓದುವ ಕೋಣೆಯನ್ನು ಅಚ್ಚುಕಟ್ಟಾಗಿ ಯೋಜಿತ ರೀತಿಯಲ್ಲಿ ಇಟ್ಟುಕೊಂಡರೆ, ಓದು ಪರಿಣಾಮಕಾರಿಯಾಗಿ ಆಗುತ್ತದೆ. ಮುಂದೆ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬರುತ್ತಿದ್ದು, ಈ ಸಮಯ ನಿಮ್ಮ ಓದುವ ಕೋಣೆಯನ್ನು ಸರಿಯಾಗಿ ಇಟ್ಟುಕೊಳ್ಳುವ ಸುಸಂದರ್ಭ.

ಸ್ಪಷ್ಟವಾಗಿ ಓದಲು ಕೋಣೆಯಲ್ಲಿ ಬೆಳಕು ಸರಿಯಾಗಿ ಬರಬೇಕು. ಹಗಲು ಹೊತ್ತು ನೈಸರ್ಗಿಕ ಬೆಳಕು ಬರುವಂತೆ ಕಿಟಕಿಗಳಿದ್ದರೆ ಚೆನ್ನ. ಇನ್ನು ರಾತ್ರಿ ವೇಳೆಯೂ ಬೆಳಕು ಸರಿಯಾಗಿರಬೇಕು. ಕಣ್ಣಿಗೆ ಚುಚ್ಚುವಷ್ಟು ಪ್ರಕಾಶಮಾನವಾದ...