ಭಾರತ, ಮಾರ್ಚ್ 7 -- ನಗು, ಜೋಕ್ ಅಥವಾ ಹಾಸ್ಯಚಟಾಕಿ ಹಾರಿಸುವಂತಹ ಕೌಶಲ್ಯಗಳು ನಿಮ್ಮನ್ನು ಉತ್ತಮ ಪೋಷಕರನ್ನಾಗಿ ಮಾಡಬಹುದು ಎಂದು ಎಂದಾದರು ನೀವು ಯೋಚಿಸಿದ್ದೀರಾ? ಪ್ಲಸ್ ಒನ್ ವೆಬ್‌ಸೈಟ್ ಅಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಹಾಸ್ಯಪ್ರಜ್ಞೆಯು ಕೇವಲ ನಗುವಲ್ಲ. ಇದು ಪೋಷಕರ ಪ್ರಬಲ ಸಾಧನವಾಗಿದೆ. ಹಾಸ್ಯವು ಪೋಷಕರು ಮತ್ತು ಮಕ್ಕಳ ಬಾಂಧವ್ಯವನ್ನು ಮತ್ತು ಮಾನಸಿಕ ಬೆಳವಣಿಗೆಯನ್ನು ಹೇಗೆ ಹೆಚ್ಚಿಸುತ್ತದೆ ಎಂಬ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಹಾಸ್ಯಪ್ರಜ್ಞೆಯು ಮಹತ್ವದ ಪಾತ್ರವಹಿಸುತ್ತದೆ. ಹಾಗೂ ಅವರಲ್ಲಿರುವ ಉದ್ವಿಗ್ನತೆ ಕಡಿಮೆಗೊಳಿಸುತ್ತದೆ. ಮಕ್ಕಳನ್ನು ಬೆಳೆಸುವುದು ಕಠಿಣದ ಕೆಲಸ ಅಥವಾ ಒತ್ತಡದ ಕೆಲಸವಲ್ಲ. ಪೋಷಕರು ಮಕ್ಕಳೊಂದಿಗೆ ಹೇಗೆ ಇರುತ್ತಾರೋ ಹಾಗೇ ಮಕ್ಕಳು ಕೂಡ ಬೆಳೆಯುತ್ತಾರೆ ಎಂದು ಸಂಶೋಧಕರು ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಅಲ್ಲದೆ, ಮಕ್ಕಳು ಹೆಚ್ಚಾಗಿ ತಾಯಿಗಿಂತ ತಂದೆಯ ಹಾಸ್ಯಪ್ರಜ್ಞೆಗೆ ಮನಸೋಲುತ್ತಾರೆ ಎಂಬುದು ಸಾಬೀತಾಗಿದೆ.

ಅಧ್ಯಯನಗಳ ಪ್ರಕಾರ, ಹ...