ಭಾರತ, ಏಪ್ರಿಲ್ 2 -- ಮಕ್ಕಳ ಲಾಲನೆ-ಪಾಲನೆ, ಬೆಳೆಸುವುದೆಂದರೆ ಅಂದುಕೊಂಡಷ್ಟು ಸುಲಭವಂತೂ ಅಲ್ಲ. ಹಾಗಂತಾ ಕಷ್ಟವೂ ಅಲ್ಲ. ಮಕ್ಕಳನ್ನು ಬೆಳೆಸುವ ಪೋಷಕರು ಅಥವಾ ಹೆತ್ತವರು ಒಂದಷ್ಟು ಜವಾಬ್ದಾರಿ ಹೊಂದಿರಬೇಕು. ಮಕ್ಕಳನ್ನು ಅತಿಯಾಗಿ ಮುದ್ದಿಸಿ ಬೆಳೆಸಿದರೆ ಸಲುಗೆ ಬೆಳೆಯಬಹುದು, ಅತಿಯಾದ ಕಾಳಜಿ ವಹಿಸಿದರೆ ದಾರಿ ತಪ್ಪಲೂಬಹುದು. ಮಕ್ಕಳನ್ನು ಹಾಗೆ ನೋಡಿಕೊಳ್ಳಬೇಕು ಹೀಗೆ ನೋಡಿಕೊಳ್ಳಬೇಕು ಎಂದು ಹೇಳುವವರಿದ್ದಾರೆ. ಆದರೆ ಹೇಗೆ ನೋಡಿಕೊಳ್ಳಬೇಕು ಎಂದು ನಿಖರವಾಗಿ ತಿಳಿಸುವವರು ಕಡಿಮೆ. ಹೀಗಾಗಿ ಪೇರೆಂಟಿಂಗ್‌ ಕುರಿತು ಸಲಹೆ ಪಡೆಯಲು ಬಯಸುವವರಿಗಾಗಿ ಬೆಂಗಳೂರಿನಲ್ಲಿ ಕಾರ್ಯಾಗಾರವೊಂದು ನಡೆಯುತ್ತಿದೆ.

ನಮ್ಮ ಮಕ್ಕಳು ಹಾಗಿರಬೇಕು, ಹೀಗಿರಬೇಕು ಎಂದು ಬಯಸುವ ನಾವು, ಅಂದರೆ ಪೋಷಕರು ಹೇಗಿರಬೇಕು ಎಂಬುದನ್ನು ತಿಳಿಸುವ ಸಲುವಾಗಿ ಈ ‌'ಪೇರೆಂಟಿಂಗ್ ಕಾರ್ಯಾಗಾರ' ನಡೆಸಲಾಗುತ್ತಿದೆ. ಮಕ್ಕಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಅಪರೂಪದ ಕಾರ್ಯಾಗಾರದಲ್ಲಿ ಮನೋವಿಜ್ಞಾನಿ ಹಾಗೂ ಆಪ್ತ ಸಲಹೆಗಾರರು ಅಗತ್ಯ ಮಾಹಿತಿ ನೀಡುತ್ತಾರೆ. ಮಕ್ಕಳ ಪೋಷ...